ನ್ಯೂಸ್ ನಾಟೌಟ್: ಬಿಜೆಪಿ ಯುವ ಮೊರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಗೆ ಬೆಳ್ಳಾರೆಯಲ್ಲಿ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್ ಹಾಗೂ ಎಸ್ ಅಂಗಾರ ಅವರು ದಿಕ್ಕು ತೋಚದೆ ಕುಳಿತಿದ್ದಾರೆ.
ಮೂವರು ನಾಯಕರು ಕೂಡ ಇದೀಗ ಜನರ ಮಧ್ಯೆ ಕಾರಿನೊಳಗೆ ಲಾಕ್ ಆಗಿದ್ದಾರೆ. ಕಾರ್ಯಕರ್ತರು ಕಾರನ್ನು ಸುತ್ತುವರಿದಿದ್ದಲ್ಲದೆ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೆಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ಆಗಬೇಕು ಹೇಳಿ ಎಂದು ಕಿಡಿಕಾರುತ್ತಿದ್ದಾರೆ. ನಾಯಕರು ಕುಳಿತುಕೊಂಡಿದ್ದ ಕಾರನ್ನೇ ಅಲುಗಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮೂವರೂ ಕಾರಿನೊಳಗೆ ಲಾಕ್ ಆಗಿದ್ದು ಕಾರ್ಯಕರ್ತರಿಂದ ಹೇಗೆ ತಪ್ಪಿಸಿಕೊಳ್ಳುವುದಪ್ಪ ಅನ್ನುವುದನ್ನು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಸಿಗೊಳಿಸುವ ಪ್ರಯತ್ನ ನಡೆಸಿದರು.