ನ್ಯೂಸ್ ನಾಟೌಟ್: ಭಾರತದಲ್ಲಿ ಹಿಜಾಬ್ ಬೇಕು ಎಂದು ಮುಸ್ಲಿಂ ಹೆಣ್ಣು ಮಕ್ಕಳು ಹಠ ಹಿಡಿದು ತರಗತಿ ಬಹಿಷ್ಕರಿಸುತ್ತಿದ್ದರೆ ಅತ್ತ ದೂರದ ಇರಾನ್ನಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಬೇಡ ಎಂದು ಬೀದಿಗೆ ಇಳಿದಿದ್ದಾರೆ. ಅಲ್ಲಿನ ಸರಕಾರ ಹಿಜಾಬ್ ಅನ್ನು ಕಡ್ಡಾಯಗೊಳಿಸಿದ್ದು ಇದರ ವಿರುದ್ಧ ಮುಸ್ಲಿಂ ಮಹಿಳೆಯರು ಗರಂ ಆಗಿದ್ದಾರೆ. ಇದೀಗ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಈಶಾನ್ಯ ಇರಾನ್ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರಕಾರಿ ಕಚೇರಿ, ಬ್ಯಾಂಕ್ಗಳ ಪ್ರವೇಶಕ್ಕೆ ಹಿಜಾಬ್ ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದ್ದರು. ಈ ನಿರ್ಧಾರಕ್ಕೆ ನಗರದ ಮೇಯರ್ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ಅನುಮತಿ ನೀಡಿದ್ದರು ಎಂದು ವರದಿಯಾಗಿದೆ. ಜುಲೈ ೧೨ ರಂದು ಸರಕಾರ ಹಿಜಾಬ್ ಮತ್ತು ಪರಿಶುದ್ಧತೆ ದಿನವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದರೆ ಮಹಿಳೆಯರು ಈ ಆಚರಣೆಯನ್ನು ಖಂಡಿಸಿ ಸಾರ್ವಜನಿಕವಾಗಿ ಹಿಜಾಬ್ ತೆಗೆದು ಪ್ರತಿಭಟನೆ ನಡೆಸಿದ್ದಾರೆ. ನೋ ಹಿಜಾಬ್ ಎಂದು ಹ್ಯಾಶ್ಟ್ಯಾಗ್ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.