ನ್ಯೂಸ್ ನಾಟೌಟ್: ಮಳೆಯ ಅಬ್ಬರಕ್ಕೆ ಸುಳ್ಯದ ಸುತ್ತಮುತ್ತ ಭಾರಿ ಪ್ರಮಾಣದ ನೀರು ಹರಿದು ರಸ್ತೆಗಳತ್ತ ನುಗ್ಗುತ್ತಿದೆ. ಮುಖ್ಯ ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಪುತ್ತೂರು -ಸುಳ್ಯ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬೊಳುಬೈಲಿನಲ್ಲಿ ಸಮುದ್ರದ ರೀತಿಯಲ್ಲಿ ನೀರು ತುಂಬಿಕೊಂಡಿದೆ.
ಚರಂಡಿಯನ್ನು ಮಳೆಗಾಲದ ಸಮಯದಲ್ಲಿ ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಮೋರಿಯ ನೀರು ಈಗ ಮುಖ್ಯ ರಸ್ತೆಗೆ ನುಗ್ಗಿದೆ. ಇದರಿಂದಾಗಿ ಈಗ ರಸ್ತೆ ಯಾವುದು ಎನ್ನುವುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ, ಬಾರಿ ಪ್ರಮಾಣದಲ್ಲಿ ತುಂಬಿಕೊಂಡ ನೀರಿನಿಂದ ಕೆಲವು ವಾಹನ ಸವಾರರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ನೀರು ಕಡಿಮೆಯಾಗುವುದನ್ನು ಕಾಯುತ್ತಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.