ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕಿನ ಸವಣಾಲುವಿನಲ್ಲಿ ಕಾಡುಕೋಣದ ಮೃತ ದೇಹವೊಂದು ನದಿಯಲ್ಲಿ ತೇಲಿ ಬಂದಿರುವ ಘಟನೆ ನಡೆದಿದೆ.
ಸುಲ್ಯೋಡಿ ಹಿತ್ತಿಲ ಪೇಲ ಭಾಗದಿಂದ ಸವಣಾಲು ಮೂಲಕ ವೇಣೂರು ಕಡೆಗೆ ಹರಿದು ಬರುವ ಫಲ್ಗುಣಿ ನದಿಯ ಹೆಬ್ಬರಹಿತ್ತಿಲು ಎಂಬಲ್ಲಿ ಕಾಡುಕೋಣದ ಮೃತದೇಹ ತೇಲಿ ಬಂದಿದೆ.ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿ ದಾಟುವ ವೇಳೆ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.