ನ್ಯೂಸ್ ನಾಟೌಟ್: ಚೆಂಬು, ಪೆರಾಜೆ ಕೇಂದ್ರವಾಗಿಯೇ ಮತ್ತೆ ಇಂದು ಬೆಳಗ್ಗೆ 10.47 ಕ್ಕೆ ಭೂ ಕಂಪನ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ದಾಖಲಾಗಿರುವುದಾಗಿ ತಿಳಿಸಿದೆ.
10 ಗಂಟೆ 47 ನಿಮಿಷಕ್ಕೆ 26 ಸೆಕೆಂಡುಗೆ ಈ ಭೂಕಂಪನ ಸಂಭವಿಸಿದ್ದು ಮಡಿಕೇರಿ – ದಕ್ಷಿಣ ಕನ್ನಡ ಗಡಿ ಗ್ರಾಮವಾಗಿರುವ ಚೆಂಬು ಹಾಗೂ ಪೆರಾಜೆಯಿಂದ 5.1 ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 2.1 ರಷ್ಟು ಭೂಕಂಪನವಾಗಿದೆ. ಇದರ ಪರಿಣಾಮ ಮಡಿಕೇರಿ ತಾಲೂಕಿನ ಕರಿಕೆ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ 9.1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 11.3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ.