ನ್ಯೂಸ್ ನಾಟೌಟ್ : ನೀರಿನಲ್ಲಿ ಮುಳುಗಿ ಹೋಗಿದ್ದ ಯುವಕರು ಇದೀಗ ಜೀವಂತವಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಸ್ವತಃ ಈ ವಿಚಾರ ತನಿಖೆಗೆ ಮುಂದಾದ ಪೊಲೀಸರಿಗೂ ಶಾಕ್ ಆಗಿದೆ.
ಕಾರಿನಲ್ಲಿದ್ದ ವಿಟ್ಲದ ಧನುಷ್ (26) ಮತ್ತು ಕನ್ಯಾನ ನಿವಾಸಿ ಧನುಷ್ (21) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ಅಪಘಾತದ ನಂತರ ಮನೆಯವರಿಗೆ ಕಾಲ್ ಮಾಡಿದ್ದ ಕಾರಿನಲ್ಲಿದ್ದ ಯುವಕರು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎಂದಷ್ಟೇ ಹೇಳಿರುವುದು ತಿಳಿದುಬಂದಿದೆ. ಯುವಕರು ಸದ್ಯ ಮನೆಗೆ ಕರೆ ಬಂದ ನಂಬರ್ನಿಂದ ಲೊಕೇಶನ್ ಟ್ರೇಸ್ ಮಾಡುತ್ತಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿಯೂ ವಿಚಾರಿಸಲಾಗುತ್ತಿದ್ದು, ಶೀಘ್ರದಲ್ಲೇ ಇಬ್ಬರನ್ನೂ ಪತ್ತೆ ಹಚ್ಚುವ ಸಾಧ್ಯತೆ ಇದೆ. ಅಪಘಾತಕ್ಕೂ ಮೊದಲು ಕಾರನ್ನು ಪೊಲೀಸರು ತಡೆದಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗುತ್ತಿದೆ.