ನ್ಯೂಸ್ ನಾಟೌಟ್: ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಕಂಡೆಕ್ಟರ್ ಇರಲ್ಲ.
ಹೌದು, ಸಿಬ್ಬಂದಿಯ ಕೊರತೆಯನ್ನು ತಪ್ಪಿಸಲು ಬಿಎಂಟಿಸಿ ಹೊಸ ವಿಧಾನ ಅಳವಡಿಕೆಗೆ ಮುಂದಾಗಿದೆ. ಕಂಡಕ್ಟರ್ ರಹಿತ ಬಸ್ ಸೇವೆಗಾಗಲಿ ಬಿಎಂಟಿಸಿ ಈಗಾಗಲೇ ಮಾರ್ಗಗಳನ್ನು ಗುರುತಿಸುತ್ತಿದೆ. ಕಂಡಕ್ಟರ್ ಇಲ್ಲದಿದ್ದರೂ ಸುಲಭವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವ 500 ಮಾರ್ಗಗಳನ್ನು ಗುರುತಿಸಲು ಬಿಎಂಟಿಸಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಿಬ್ಬಂದಿ, ಅದರಲ್ಲೂ ಚಾಲಕರ ಕೊರತೆ ಉಂಟಾಗಿದೆ. ಇದರಿಂದಾಗಿ 500 ಕ್ಕೂ ಬಿಎಂಟಿಸಿ ಹೆಚ್ಚು ಬಸ್ಗಳು ಡಿಪೋಗಳಲ್ಲೇ ನಿಲ್ಲುವಂತಾಗಿದೆ. ಕೋವಿಡ್ಗೂ ಮುನ್ನ ಇದ್ದ ವೇಳಾಪಟ್ಟಿಗೆ ಹೋಲಿಕೆ ಮಾಡಿದರೆ ಬಸ್ ಸೇವೆಗಳ ಸಂಖ್ಯೆ ಕಡಿಮೆಯಾಗಲು ಸಿಬ್ಬಂದಿ ಕೊರತೆ ಕಾರಣವಾಗಿದೆ.