ನ್ಯೂಸ್ ನಾಟೌಟ್: ಸುಳ್ಯ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಪೊಲೀಸ್ ರಾಣೆಗಳಿಗೆ ನೂತನವಾಗಿ ಪೊಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶಿಸಿದ್ದಾರೆ.
ಕುಂದಾಪುರ ಎಸ್ಐ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣೆಗೆ, ವಿಟ್ಲ ರಾಜಾ ಎಸ್ಐ ಆಗಿದ್ದ ಮಂಜುನಾಥ ಟಿ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಳ್ಳಾರೆ ಎನ್.ಐ ಆಗಿದ್ದ ರುಕ್ಮ ನಾಯ್ಕ್ , ಸುಬ್ರಹ್ಮಣ್ಯ ಎಸ್ ಐ ಆಗಿದ್ದ ಜಂಬೂರಾಜ್ ಮಹಾಜನ್ ಅವರನ್ನು ಐಜೆಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.