ನ್ಯೂಸ್ ನಾಟೌಟ್: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಗುತ್ತಿಗಾರು ವತಿಯಿಂದ ಅಮರ ಯೋಗ ತರಬೇತಿ ಕೇಂದ್ರ ಆರಂಭವಾಗಿದೆ.
ಈ ಕೇಂದ್ರವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಕೊಂಬೆಟ್ಟು, ಜಗದೀಶ್ ಬಾಕಿಲ, ನಿವೃತ್ತ ಯೋಧ ಅನಿತಾ ಮಹೇಶ್ ಕೊಪ್ಪತಡ್ಕ, ರಾಷ್ಟ್ರಿಯ ಯೋಗ ಪ್ರತಿಭೆ ದೀಕ್ಷಾ ಎಲಿಮಲೆ, ವೆಂಕಟರಮಣ ಸೊಸೈಟಿ ನಿಂತಿಕಲ್ ಶಾಖಾ ವ್ಯವಸ್ಥಾಪಕ ಚರಣ್ ದೇರಪ್ಪಜನ ಮನೆ ಜಂಟಿಯಾಗಿ ಉದ್ಘಾಟಿಸಿದರು. ಪ್ರತಿ ಆದಿತ್ಯವಾರ ಬೆಳಿಗ್ಗೆ 7ರಿಂದ 8ರವರೆಗೆ ಯೋಗ ತರಬೇತಿ ಗುತ್ತಿಗಾರು ಗ್ರಾಮ ಪಂಚಾಯತ್ ನ ಪ. ಪಂಗಡ ಸಭಾ ಭವನದಲ್ಲಿ ನಡೆಯಲಿದ್ದು ಆಸಕ್ತರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ರಾಷ್ಟ್ರಿಯ ಯೋಗ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ, ಬಿ. ಯಂ. ಯಸ್. ರಿಕ್ಷಾ ಯೂನಿಯ್ ಗೌರವ ಅಧ್ಯಕ್ಷ ಮೋಹನ್ ಮುಕ್ಕೂರ್, ವೆಂಕಟರಮಣ ಸೊಸೈಟಿ ಸುಬ್ರಮಣ್ಯ ಶಾಖಾ ಸಿಬ್ಬಂದಿ ವೇಣುಗೋಪಾಲ್ ಕೊಂದಳ, ತುಳಸಿಕುಮಾರ್ ಕೊರ್ತೆಡ್ಕ, ಗಿರಿಧರ್ ಉತ್ರಂಬೆ, ಪ್ರಶಾಂತ್ ವಾಲ್ತಾಜೆ, ಅರುಣ್ ಮೇಕೆರಿ, ಶಶಿಕಲಾ ಬಾಲಕೃಷ್ಣ ಬಾಕಿಲ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ ಮತ್ತು ಸರ್ವಸದಸ್ಯರು ಯೋಗ ತರಗತಿ ಸದಸ್ಯರು ಉಪಸ್ಥಿತರಿದ್ದರು.