ಬೆಂಗಳೂರು : ಉಪನೋಂದಣಾಧಿಕಾರಿ ಕಚೇರಿ ಸಮಯವನ್ನು ಮರು ಪರಿಷ್ಕರಣೆ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದೇಶದ ಪ್ರಕಾರ, ಸಬ್ ರಿಜಿಸ್ಟಾರ್ ಕಚೇರಿಗಳು ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತವೆ. 2 ಮತ್ತು 4 ನೇ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ವರ್ಷದ ಆರಂಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೊದಲು ಬೆಳಗ್ಗೆ 10 ರಿಂದ ರಾತ್ರಿ 7 ಗಂಟೆವರೆಗೆ ನಿಗದಿ ಮಾಡಲಾಗಿತ್ತು. ಇದೀಗ ಮೊದಲಿನಂತೆ ಸೇವಾ ಸಮಯ ನಿಗದಿಯಾಗಿದೆ.