ನ್ಯೂಸ್ ನಾಟೌಟ್: ಇತ್ತೀಚಿಗೆ ಕಾರ್ಕಳ ದಲ್ಲಿ ವಿಶೇಷವಾದ ಮದುವೆ ನಡೆದಿತ್ತು. ಇಬ್ಬರೂ ಕೂಡ ಕುಬ್ಜರಾಗಿದ್ದು ಮದುವೆ ಬಹಳಷ್ಟು ಸಂಭ್ರಮಕ್ಕೆ ಕಾರಣವಾಗಿತ್ತು. ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ನಡೆದ ಅಪರೂಪದ ಜೋಡಿಯ ವಿವಾಹ ಮಹೋತ್ಸವು ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು ಇಲ್ಲಿ ವಧುವಿನ ಹೆಸರು ಶ್ರೀಕೃತಿ. ಹಿರಿಯಡ್ಕ ಓಂತಿಬೆಟ್ಟು ದಿ.ಶ್ರೀನಿವಾಸ್ ನಾಯ್ಕ ಅವರ ಪುತ್ರಿ ಹಾಗೂ . ವರನ ಹೆಸರು ಹರ್ಷಿತ್ ಕುಮಾರ್. ಮಾಣಿಯ ಸಿಂಧ್ಯಾ ಚಂದ್ರೋಜಿ ರಾವ್ ಅವರ ಪುತ್ರ. ವರ ಹರ್ಷಿತ್ ಖಾಸಗಿ ಉದ್ಯೋಗಿಯಾಗಿದ್ದು ಮದುಮಗಳು ಕೂಡ ಖಾಸಗಿ ಉದ್ಯೋಗದಲ್ಲಿ ಇದುವರೆಗೂ ಇದ್ದು, ಈಗ ಕೆಲಸ ಬಿಟ್ಟಿದ್ದಾರೆ. ಆದರೆ ವಧು ಡ್ಯಾನ್ಸ್ ಕೊರಿಯೋಗ್ರಫಿ ಅನುಭವ ಹೊಂದಿದ್ದು ಅತ್ಯಂತ ಪ್ರತಿಭಾನ್ವಿತೆಯಾಗಿದ್ದಾರೆ.
ವಧುವಿಗೆ ಈ ಹಿಂದೆ ಹಲವು ಸಂಬಂಧಗಳು ಬಂದಿತ್ತಾದರೂ ಅವರೆಲ್ಲ ಎತ್ತರದವರೇ ಆಗಿದ್ದರು. ಹೀಗಾಗಿ ಯುವತಿ ನಿರಾಕರಿಸುತ್ತಲೇ ಬಂದಿದ್ದರು. ಕೊನೆಗೂ ಆಕೆಯ ಎತ್ತರಕ್ಕೆ ಸರಿಸಮನಾದ ಸೂಕ್ತ ಯುವಕ ಸಿಕ್ಕಿರುವುದು ಆಕೆಯ ಪಾಲಿಗೆ ಖುಷಿ ನೀಡಿದೆ ಎಂದು ಆಕೆಯ ಬಂಧುಗಳು ಹೇಳಿಕೊಂಡಿದ್ದಾರೆ. ಮದುವೆ ಮಂಟಪ ತನಕ ಡ್ಯಾನ್ಸ್ನಲ್ಲಿಯೇ ಕುಟುಂಬಸ್ಥರು ಸಂಭ್ರಮಿಸಿದ್ದು ವಿಶೇಷವಾಗಿತ್ತು.