ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಸಂದರ್ಶನವೊಂದಕ್ಕೆ ತೆರಳಿದ್ದ ಶಾಲಾ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಸೋಮವಾರ ನಡೆದಿದೆ.
ಕಳೆಂಜ ಉದ್ರಾಜೆ ನಿವಾಸಿ ಭಾರತಿ (42) ಮೃತಪಟ್ಟವರಾಗಿದ್ದಾರೆ. ಇವರು ಕಾಯರ್ತಡ್ಕ ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದಾರೆ. ಸಂದರ್ಶನವೊಂದರ ಹಿನ್ನೆಲೆಯಲ್ಲಿ ಭಾರತಿಯವರು ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ ಡಾ ಕುಶಾಲಪ್ಪ, 1 ಗಂಡು, 1 ಹೆಣ್ಣು ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.