ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಕೊಡಗು ಸಂಪಾಜೆಯ ಜನಪರ ನಾಯಕ ಕಳಗಿ ಬಾಲಚಂದ್ರ ಹತ್ಯೆ ಆರೋಪಿಯಾದ ಸಂಪತ್ ಕಲ್ಲುಗುಂಡಿಯನ್ನು ಹತ್ಯೆ ಮಾಡಿ ಸದ್ಯ ಜೈಲಿನಲ್ಲಿರುವ ಮನು ಸಂಪಾಜೆಗೆ ಅನಾಮಿಕ ವ್ಯಕ್ತಿಯೊಬ್ಬ ಜೀವ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ.
ಹತ್ಯೆಯಾಗಿರುವ ಸಂಪತ್ ನ ಸ್ನೇಹಿತ ಎಂದು ಹೇಳಿಕೊಂಡಿರುವ ಕಲಿ ಯೋಗೀಶ ಎಂಬ ಭೂಗತ ವ್ಯಕ್ತಿ ಮಂಗಳೂರಿನ ಪತ್ರಿಕೆಯ ಕಚೇರಿಗೆ ಫೋನ್ ಮಾಡಿ ಸಂಪತ್ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಗರ್ಜಿಸಿದ್ದಾನೆ. ಸಂಪತ್ ಹತ್ಯೆ ನಡೆಸಿದ ಮನು ಸಂಪಾಜೆ ಹೊರಗೆ ಬಂದ ಬೆನ್ನಲ್ಲೇ ಆತನನ್ನು ಕೊಲೆ ಮಾಡುವುದಾಗಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.