ನ್ಯೂಸ್ ನಾಟೌಟ್: ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಬೆಳೆದು ಕೊನೆಗೆ ಅವರಿಗೇ ಕೈಕೊಟ್ಟು ಟಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಖ್ಯಾತ ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲೂ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆಯೇ ಅವರಿಗೆ ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಜತೆ ‘ಗುಡ್ ಬೈ’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲದೆ ರಣಬೀರ್ ಕಪೂರ್ ಚಿತ್ರಕ್ಕೂ ರಶ್ಮಿಕಾ ನಾಯಕಿ ಆಗಿದ್ದಾರೆ. ಈ ಚಿತ್ರದ ಸೆಟ್ನ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರನ್ನು ರಣಬೀರ್ ‘ಮ್ಯಾಮ್’ ಎಂದು ಕರೆಯುತ್ತಾರೆ. ರಣಬೀರ್ ಬಗ್ಗೆ ಇದ್ದ ಗೌರವ ರಶ್ಮಿಕಾಗೆ ಹೆಚ್ಚಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ರಣಬೀರ್ ತುಂಬಾನೇ ಲವೆಬಲ್. ಅವರನ್ನು ಮೊದಲ ಬಾರಿ ಭೇಟಿ ಮಾಡುವಾಗ ನಾನು ನರ್ವಸ್ ಆಗಿದ್ದೆ. ಆದರೆ, ಐದೇ ನಿಮಿಷಗಳಲ್ಲಿ ಅವರ ಜತೆ ಒಳ್ಳೆ ಯ ಬಾಂಧವ್ಯ ಬೆಳೆಯಿತು. ಇಡೀ ಇಂಡಸ್ಟ್ರಿಯಲ್ಲಿ ಅವರು ಮಾತ್ರ ನನ್ನನ್ನು ಮ್ಯಾಮ್ ಎಂದು ಸಂಭೋದಿಸುತ್ತಾರೆ. ನನಗೆ ಅದು ಇಷ್ಟ ಆಗುವುದಿಲ್ಲ ಎಂದಿದ್ದಾರೆ ರಶ್ಮಿಕಾ. ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಹಾಗೂ ರಶ್ಮಿಕಾ ನಟಿಸುತ್ತಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.