ನ್ಯೂಸ್ ನಾಟೌಟ್ : ಹಿಂದೂಗಳ ಆರಾಧ್ಯ ದೇವರಾಗಿರುವ ಶ್ರೀ ರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರನ್ನು ಕ್ಲಬ್ ಹೌಸ್ ವೊಂದರಲ್ಲಿ ಅವಮಾನಿಸಿದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ನ್ಯಾಯವಾದಿ ಶೈಲಜಾ ಅಮರನಾಥ್ ಮನೆ ಮೇಲೆ ಯುವಕರ ತಂಡವೊಂದು ದಾಳಿ ನಡೆಸಿದ ಘಟನೆ ಇಂದು ಸಂಜೆ ನಡೆದಿದೆ.
ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಹಿಂದೂ ದೇವರ ಅವಮಾನಿಸಿ ಶೈಲಜಾ ಹೇಳಿಕೆ ನೀಡಿದ್ದಾರೆ ಅನ್ನುವ ಬಗ್ಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲಿಯೇ ಶೈಲಜಾ ಅಮರನಾಥರವರು ಮನೆಯಂಗಳಕ್ಕೆ ಬಂದಿರುವ ಯುವಕರ ತಂಡವೊಂದು ಮನೆಗೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು, ಕಪ್ಪು ಮಸಿ ಎರಚಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.