ನ್ಯೂಸ್ ನಾಟೌಟ್ : ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಒಟ್ಟು ಶೇ. 61.88 ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹೊಸದಾಗಿ ಒಟ್ಟು 5,99,794 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4,02,697 ಮಂದಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಅಂದರೆ ಶೇ.67.14 ಮಂದಿ ಪಾಸಾಗಿದ್ದಾರೆ.
61838 ಮಂದಿ ಪುನರಾವರ್ತಿತವಾಗಿ ಪರೀಕ್ಷೆಯನ್ನು ಪಡೆದುಕೊಂಡಿದ್ದರು. ಇದರಲ್ಲಿ 14403 ಮಂದಿ ಪಾಸಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 21931 ಪರೀಕ್ಷೆ ಬರೆದಿದ್ದರು ಇವರಲ್ಲಿ 5866 ಮಂದಿ ಪಾಸಾಗಿದ್ದಾರೆ. ಒಟ್ಟು 683563 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 422966 ಮಂದಿ ಪಾಸಾಗಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳು ಹೆಚ್ಚು ತೇರ್ಗಡೆಯಾಗಿರುವುದು ವಿಶೇಷವಾಗಿದೆ. ಫೇಲ್ ಆದವರು ಹೆಚ್ಚು ನೊಂದುಕೊಳ್ಳುವ ಅಗತ್ಯವಿಲ್ಲ. ಅವರು ಆಗಸ್ಟ್ 1ಕ್ಕೆ ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು. ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.