ನ್ಯೂಸ್ ನಾಟೌಟ್: ಅನುಷ್ಕಾ ಶೆಟ್ಟಿ ಸಹೋದರ ಗುಣ ರಂಜನ್ ಶೆಟ್ಟಿ ಕೊಲೆಗೆ ಸಂಚು ರೂಪಿಸಲಾಗಿದೆ ಅನ್ನುವ ಸುದ್ದಿ ಎರಡು ದಿನಗಳ ಹಿಂದೆ ಸದ್ದು ಮಾಡಿತ್ತು. ಈ ಕೊಲೆಯ ಪ್ರಯತ್ನದ ಹಿಂದಿರುವ ಪ್ಲಾನ್ ಯಾರು ಅನ್ನುವುದರ ಬಗ್ಗೆ ಭಾರಿ ಗೊಂದಲವೂ ಎದ್ದಿತ್ತು. ಇದೀಗ ಜಯ ಕರ್ನಾಟಕ ಸಂಘಟನೆ ಮನ್ಮಿತ್ ರೈ ಎಂಬ ವ್ಯಕ್ತಿಯ ವಿರುದ್ಧ ದೂರು ನೀಡಿದೆ. ಆದರೆ ಮನ್ವಿತ್ ತನ್ನ ಹುಟ್ಟು ಹಬ್ಬದ ಖುಷಿಯಲ್ಲಿ ವಿದೇಶದಲ್ಲಿ ಹುಡುಗಿಯರ ಜತೆ ಮಜಾ ಮಾಡುತ್ತಿದ್ದಾನೆ. ಕಂತೆ ಕಂತೆ ನೋಟುಗಳನ್ನು ಅವರತ್ತ ಎಸೆದು ಸುದ್ದಿಯಾಗಿದ್ದಾನೆ.
ಮನ್ಮಿತ್ ರೈ ಮುತ್ತಪ್ಪಾ ರೈ ಸಂಬಂಧಿ. ಈ ಹಿಂದೆ ಗುಣ ರಂಜನ್ ಮತ್ತು ಮನ್ಮಿತ್ ಒಟ್ಟಿಗೆ ಇದ್ದರು. ಬಳಿಕೆ ಬೇರೆ ಬೇರೆಯಾಗಿದ್ದಾರೆ. ಸದ್ಯ ಮನ್ಮಿತ್ ರೈ ವಿರುದ್ಧ ಕೊಲೆಗೆ ಸಂಚು ರೂಪಿಸಿರುವ ಆರೋಪ ಕೇಳಿ ಬಂದಿದ್ದು. ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನ್ಮಿತ್ ರೈ, ನನಗೂ ಇದಕ್ಕೂ ಸಂಬಂಧವಿಲ್ಲ. ಸದ್ಯ ನಾನು ಬ್ಯುಸಿನೆಸ್ ವಿಚಾರಕ್ಕೆ ವಿದೇಶಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಸದ್ಯ ಥಾಯ್ಲೆಂಡ್ ನಲ್ಲಿರುವ ಮನ್ಮಿತ್ ರೈ ಭರ್ಜರಿ ಪಾರ್ಟಿ ಮಾಡಿದ್ದಾನೆ. ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹುಡುಗಿಯರ ಮೇಲೆ ಹಣದ ಕಂತೆ ಎಸೆದಿದ್ದಾನೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.