ನ್ಯೂಸ್ ನಾಟೌಟ್: ಮುಂದಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು, ದೂರುಗಳನ್ನು ಯಾರು ಬೇಕಾದರೂ ನೇರವಾಗಿ ಶಿಕ್ಷಣ ಸಚಿವರಿಗೆ ಸಲ್ಲಿಸಬಹುದು. ಸ್ವತಃ ಈ ವಿಷಯವನ್ನು ಬಿಸಿ ನಾಗೇಶ್ ತಿಳಿಸಿದ್ದಾರೆ. ಪೋಷಕರು, ಸಾರ್ವಜನಿಕರು ನೀಡುವ ದೂರುಗಳಿಗೆ ಖುದ್ದು ಶಿಕ್ಷಣ ಸಚಿವರೇ ಉತ್ತರ ಕೊಡುವ ಕೆಲಸ ಕೂಡ ಮಾಡುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಈ ವಿನೂತನ ಪ್ರಯತ್ನದ ಅಂಗವಾಗಿ ವೆಬ್ಸೈಟ್ ವೊಂದು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.
ನೂತನ ವೆಬ್ ಸೈಟ್ ನಲ್ಲಿ ಸಾರ್ವಜನಿಕರು ದೂರು ನೀಡಲು ವಿಶೇಷ ಪೇಜ್ ಪ್ರಾರಂಭ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರನ್ನು ನೇರವಾಗಿ ಸಾರ್ವಜನಿಕರು ಇಲ್ಲಿಗೆ ಸಲ್ಲಿಸಬಹುದು. ಈ ದೂರನ್ನು ಖುದ್ದು ಶಿಕ್ಷಣ ಸಚಿವರೇ ನೋಡ್ತಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡ್ತಾರೆ. ಅಷ್ಟೇ ಅಲ್ಲ ಸಮಸ್ಯೆ ಪರಿಹಾರಕ್ಕೆ ಟೀಂ ರಚನೆ ಮಾಡಲಿದ್ದು, ದೂರು ಇತ್ಯರ್ಥ ಆಗೋವರೆಗೂ ಈ ಟೀಂ ಕೆಲಸ ಮಾಡಲಿದೆ. ದೂರು ಪರಿಹಾರ ಆದ ಮೇಲೆ ಸಚಿವರ ಗಮನಕ್ಕೆ ಈ ಟೀಂ ತರಲಿದೆ. ಅಷ್ಟೇ ಅಲ್ಲ, ಶಾಲಾ ಶಿಕ್ಷಣ ಇಲಾಖೆ ನೂತನವಾಗಿ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭ ಮಾಡ್ತಿದೆ. ಟ್ವಿಟರ್, ಫೇಸ್ ಬುಕ್ ನಲ್ಲೂ ಶಿಕ್ಷಣ ಇಲಾಖೆ ಮಾಹಿತಿಗಳು ಇನ್ನು ಮುಂದೆ ಲಭ್ಯವಾಗಲಿವೆ. ಇಲಾಖೆಯ ಆದೇಶಗಳು, ಕಾರ್ಯಕ್ರಮಗಳು, ಮಾಹಿತಿಗಳು ಈ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಮುಂದೆ ಲಭ್ಯವಾಗಲಿವೆ.