ನ್ಯೂಸ್ ನಾಟೌಟ್: ಸುಳ್ಯದಲ್ಲಿ ಅಪರಿಚಿತರ ತಂಡವೊಂದು ತಂಗಿ ಮನೆಯಿಂದ ಹೊರಬರುತ್ತಿದ್ದ ಅಣ್ಣನ ಮೇಲೆ ಗುಂಡಿನ ಮಳೆಗೆರೆದ ಘಟನೆ ನಡೆದಿದ್ದು ಸುಳ್ಯ ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿ ರಿಜಿಸ್ಟ್ರೇಷನ್ ಹೊಂದಿದ್ದ ಸ್ಕಾರ್ಫಿಯೋ ಕಾರಿನಲ್ಲಿ ಬಂದವರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸುಳ್ಯ ತಾಲೂಕಿನ ಕಸಬಾ ಗ್ರಾಮದ ಜಯನಗರ ನಿವಾಸಿ ಮಹಮ್ಮದ್ ಸಾಯಿ ( 39) ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಜೂ 5 ರಾತ್ರಿ 10 ಗಂಟೆಗೆ ಮಹಮ್ಮದ್ ಸಾಯಿ ಸುಳ್ಯದ ಜ್ಯೋತಿ ಸರ್ಕಲ್ ಸಮೀಪ ವೆಂಕಟರಮಣ ಸೊಸೈಟಿ ಬಳಿ ಸಾಯಿಯವರು ತನ್ನ ಹುಂಡೈ ಕ್ರೆಟಾ ಕಾರು ನಿಲ್ಲಿಸಿ ಪಕ್ಕದಲ್ಲಿದ್ದ ತನ್ನ ತಂಗಿ ಮನೆಗೆ ತೆರಳಿ ವಾಪಸ್ಸು ಕಾರಿನ ಬಳಿ ತಲುಪುತ್ತಿದ್ದಂತೆ ಎಲ್ಲಿಂದಲೋ ಗುಂಡಿನ ದಾಳಿ ನಡೆದಿದೆ.
ಮಡಿಕೇರಿ ರಿಜಿಸ್ಟ್ರೇಷನಿನ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಾರು ಬಳಿ ನಿಂತಿದ್ದ ಸಾಯಿಯವರ ಮೇಲೆ ಗುಂಡಿನ ದಾಳಿ ನಡೆಸಿ ಕ್ಷಣಮಾತ್ರದಲ್ಲಿ ಪರಾರಿಯಾಗಿದೆ. ಸಾಯಿ ಅವರ ಬೆನ್ನಿನ ಎಡ ಬದಿಗೆ ತಾಗಿದೆ ಹಾಗೂ ಕಾರಿನ ಬಲ ಬದಿಯ ಎರಡು ಡೋರ್ ಗಳ ಮದ್ಯಕ್ಕೆ ಗುಂಡು ತಾಗಿದ ಗುರುತು ಕಾಣಿಸಿದೆ.
ಐಪಿಸಿ ಕಲಂ: 307 34 ಐಪಿಸಿ ಮತ್ತು ಕಲಂ 25 27 ಆರ್ಮ್ಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳು ಸಾಯಿಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.