ನ್ಯೂಸ್ ನಾಟೌಟ್ : ಕಲ್ಲುಗುಂಡಿ ಗೂನಡ್ಕ ಭಾಗದಲ್ಲಿ ಭೂಕಂಪದಿಂದ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಗೂನಡ್ಕ ಅಬ್ಬಾಸ್ ರವರ ಮನೆಗೆ ದರ್ಖಾಸ್ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿಕೆ ಅಬುಸಾಲಿ ಹಾಗೂ ಸಿದ್ದೀಕ್ ದರ್ಖಾಸ್ ರವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮಿ ಸುಳ್ಯ ಎಸ್.ಐ.ದಿಲೀಪ್ ಕುಮಾರ್,ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಸದಸ್ಯರಾದ ಶೌವಾದ್ ಗೂನಡ್ಕ ,ಎಸ್.ಕೆ.ಹನೀಫ್,ಕಲ್ಲುಗುಂಡಿ ಹೊರಠಾಣೆಯ ಎ.ಎಸ್.ಐ.ರ ವೀಂದ್ರ ,ಸಂಪಾಜೆ ಗ್ರಾಮ ಪಂಚಾಯತ್ ಅಧಿಕಾರಿಗಳು ಜತೆಗಿದ್ದರು.