ನ್ಯೂಸ್ ನಾಟೌಟ್: ಹಿಂದೂಗಳ ಆರಾಧ್ಯ ದೇವರಲ್ಲಿ ಗಣೇಶ ದೇವರು ಕೂಡ ಒಬ್ಬರು. ಯಾವುದೇ ಪೂಜೆ ಸಲ್ಲಿಸುವುದಕ್ಕೂ ಮೊದಲು ವಿಘ್ನ ನಿವಾರಕನಾದ ಗಣೇಶನಿಗೆ ಪೂಜೆ ಸಲ್ಲಿಸಿ ಕಾರ್ಯ ಆರಂಭಿಸುವುದು ವಾಡಿಕೆ. ಅಂತಹ ಗಣಪತಿ ದೇವರನ್ನು ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ವ್ಯಕ್ತಿಯೊಬ್ಬ ಆನೆ ಎಂದು ಸಂಬೋದಿಸಿ ಕರೆದಿದ್ದಾನೆ, ಈತನಿಗೆ ಜಾಲತಾಣದಲ್ಲಿಯೇ ಭಾರತೀಯರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೊದಲು ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಂಡು ಮಾತನಾಡುವುದನ್ನು ಕಲಿಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ. ಮೇರಿ ಓಜ್ ಚುಕ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಬಾಳೆ ಕಾಯಿಯಿಂದ ಕಲಾವಿದರೊಬ್ಬರು ಮಾಡಿದ ಗಣೇಶನ ಕಲಾಕೃತಿಯನ್ನು ಪ್ರಕಟಿಸಿಕೊಂಡಿದ್ದಾರೆ. ಇದಕ್ಕೆ ಲಕ್ಷಾಂತರ ಭಾರತೀಯರೂ ಸೇರಿದಂತೆ ವಿದೇಶಿಯರೂ ಪ್ರತಿಕ್ರಿಯಿಸಿದ್ದಾರೆ. ಆದರೆ ವಿದೇಶಿ ವ್ಯಕ್ತಿಯೊಬ್ಬ ಆನೆ ಎಂದು ಬಾಯಿಗೆ ಬಂದಂತೆ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.