ನ್ಯೂಸ್ ನಾಟೌಟ್: ಬೆಳ್ಳಾರೆಯಲ್ಲಿ ಸ್ವಾಮಿ ಕೊರಗಜ್ಜನ ಪವಾಡವೊಂದು ನಡೆದಿದೆ. ಕಾಫೀ ಕುಡಿಯಲು ಹೋಟೆಲ್ ಗೆ ಬಂದಿದ್ದ ಯುವತಿಯೊಬ್ಬರ ಮೊಬೈಲ್ ಹೋಟೆಲ್ ನಲ್ಲಿ ಸ್ಫೋಟಗೊಂಡು ನೋಡನೋಡುತ್ತಲೇ ಸುಟ್ಟು ಕರಕಲಾಗಿದೆ. ಆದರೆ ಅಚ್ಚರಿ ಎಂಬಂತೆ ಇಡೀ ಮೊಬೈಲ್ ಸುಟ್ಟರೂ ಮೊಬೈಲ್ನ ಕವರ್ ನಲ್ಲಿದ್ದ ಸ್ವಾಮಿ ಕೊರಗಜ್ಜನ ಫೋಟೋಗೆ ಏನೂ ಹಾನಿಯಾಗಿಲ್ಲ. ಜತೆಗೆ ಯುವತಿಯೂ ಅಪಾಯದಿಂದ ಪಾರಾಗಿದ್ದಾರೆ. ಈ ಪವಾಡ ನೋಡಿದ ಜನ ಕೊರಗಜ್ಜನೆ ಈಕೆಯನ್ನು ಪಾರು ಮಾಡಿದ ಎಂದು ಕೈಮುಗಿಯುತ್ತಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ನಿಂದ ಆನ್ ಲೈನ್ ಮೂಲಕ ರೆಡ್ ಮಿ ನೋಟ್ 8 ಮೊಬೈಲ್ ಸೆಟ್ ಅನ್ನು ಖರೀದಿಸಲಾಗಿತ್ತು.ಕಳೆ ದ ಎರಡು ದಿನಗಳ ಹಿಂದೆ ಇವರ ಮೊಬೈಲ್ ನಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮೊಬೈಲ್ ಶಾಪ್ ನಲ್ಲಿ ದುರಸ್ತಿಗೆ ಮಾಡಿಸಲಾಗಿತ್ತು. ಜೂ. 2 ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಮಹಿಳೆ ಬೆಳ್ಳಾರೆಯ ಕೆಳಗಿನ ಪೇಟೆಯ ಹೋಟೆಲ್ ಉಲ್ಲಾಸ್ ಗೆ ಬಂದು ಟೇಬಲ್ ಮೇಲೆ ಮೊಬೈಲ್ ಇಟ್ಟು ಸ್ನೇಹಿತೆಯರ ಜೊತೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಸ್ಫೋ ಟಗೊಂ ಡು ಬೆಂಕಿ ಹತ್ತಿಕೊಂಡಿದೆ. ಹೋಟೆಲ್ ನಲ್ಲಿದ್ದ ಗ್ರಾಹಕರು ಮತ್ತು ಮಾಲಕರು, ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಆಗಮಿಸಿದರೆನ್ನಲಾಗಿದೆ. ಹೋಟೆಲ್ ಮಾಲಕರಾದ ವಸಂತ ಉಲ್ಲಾಸ್ ರವರು ಉರಿಯುತ್ತಿದ್ದ ಮೊಬೈಲ್ ನ್ನು ಟೇಬಲ್ ನಿಂದ ನೆಲಕ್ಕೆ ದೂಡಿದರು. ಅಷ್ಟರಲ್ಲೇ ಟೇಬಲ್ ನ ಮೇಲ್ಬಾಗದ ಪ್ಲೈವುಡ್ ಕರಟಿ ಕಪ್ಪಾಗಿತ್ತು. ಒಂದು ವೇಳೆ ಯುವತಿ ಫೋನ್ ನಲ್ಲಿ ಮಾತನಾಡುತ್ತಿರುವಾಗ ಅಥವಾ ಕೈಯಲ್ಲಿ ಹಿಡಿದುಕೊಂಡಿರುವಾಗ ಈ ಘಟನೆ ನಡೆಯತ್ತಿದ್ದರೆ ಆಕೆಯ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಾತ್ರವಲ್ಲ ಪವಾಡ ಎನ್ನುವಂತೆ ಮೊಬೈಲ್ ಬೆಂಕಿಗಾಹುತಿಯಾದರೂ ಅದರ ಕವರ್ ನಲ್ಲಿ ಇದ್ದ ಸ್ವಾಮಿ ಕೊರಗಜ್ಜನ ಫೊಟೊ ಮಾತ್ರ ಉರಿದಿರಲಿಲ್ಲವೆನ್ನಲಾಗಿದೆ.