ನ್ಯೂಸ್ ನಾಟೌಟ್: ಇಷ್ಟು ದಿನ ಜನ ಸಾಮಾನ್ಯರಿಗೆ ಹಲವಾರು ಷರತ್ತು ಹಾಕುತ್ತಿದ್ದ ತಾಲಿಬಾನ್ ಉಗ್ರರು ಈಗ ಮತ್ತೊಂದು ಹಂತ ಮೇಲಕ್ಕೆ ಹೋಗಿ ಮಾಧ್ಯಮ ಸಂಸ್ಥೆಗಳ ಮೇಲೂ ಆದೇಶ ಪಾಲನೆಯ ಒತ್ತಡ ತರುತ್ತಿವೆ.
ಹೌದು, ಇದೀಗ ಟಿವಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ನಿರೂಪಣೆ ಸಮಯದಲ್ಲಿ ಮುಖ ಮುಚ್ಚಿಕೊಳ್ಳುವ ಹಾಗೆ ಬಟ್ಟೆ ಧರಿಸಬೇಕು ಎಂದು ಆಫ್ಘಾನಿಸ್ತಾನದ ತಾಲಿಬಾನ್ ಸರಕಾರ ಆದೇಶಿಸಿದೆ. ತಾಲಿಬಾನಿನ ಮಾಹಿತಿ ಮತ್ತು ಸಂಸ್ಕೃತ ಸಚಿವಾಲಯದಿಂದ ಈ ಆದೇಶ ಹೊರ ಬಿದ್ದಿದೆ. ಇದು ಅಂತಿಮ ಆದೇಶವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಾಲಿಬಾನ್ ಹೇಳಿರುವುದಾಗಿ ಟೊಲೊ ಸುದ್ದಿ ವಾಹಿನಿ ವರದಿ ಮಾಡಿದೆ.