ನ್ಯೂಸ್ ನಾಟೌಟ್: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಬ್ರಹ್ಮ ಕೇಶವ ಜೋಗಿತ್ತಾಯ (80) ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೇ 24ರಂದು ಸ್ವಗೃಹದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ೯ಕರಾಗಿ, ಪ್ರಧಾನ ಆಚ೯ಕರಾಗಿ ಸುಮಾರು 50 ವಷ೯ಗಳ ಸೇವೆ ಸಲ್ಲಿಸಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಜೋಗಿತ್ತಾಯರವರು ಹಲವಾರು ದೇವಸ್ಥಾನಗಳ ನಿಮಾ೯ಣಕ್ಕೆ ಮಾಗ೯ದಶ೯ನ ನೀಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓವ೯ ಪುತ್ರಿ, ಬಂಧು ವಗ೯ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.