ಉಪ್ಪಿನಂಗಡಿ: ದೇಶ ಸೇವೆ ಮಾಡಿ ಇದೀಗ ನಿವೃತ್ತಿ ಹೊಂದಿ ತಮ್ಮ ಊರಿಗೆ ವಾಪಸ್ ಆಗಿರುವ ಹವಾಲ್ದಾರ್ ಹರಿಶ್ಚಂದ್ರ ಇಚ್ಲಂಪ್ಪಾಡಿ ಅವರನ್ನು ಹುಟ್ಟೂರು ಉಪ್ಪಿನಂಗಡಿಯಲ್ಲಿ ಅಭಿಮಾನಿಗಳು, ಕುಟುಂಬಸ್ಥರು ಆತ್ಮೀಯವಾಗಿ ಬರ ಮಾಡಿಕೊಂಡರು.
ಜಾತಿ ಮತ ಭೇದವಿಲ್ಲದೆ ಎಲ್ಲ ಧರ್ಮದ ಜನಸಾಮಾನ್ಯರು ಬಂದು ಹರಿಶ್ಚಂದ್ರ ಇಚ್ಲಂಪ್ಪಾಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು. 2002ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಅವರು ದೇಶದ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್ ನಲ್ಲಿ ತರಬೇತಿ ಪಡೆದ ಅವರು ಮೊದಲನೆಯದಾಗಿ ಜಮ್ಮು ಕಾಶ್ಮೀರದ ಪರಾಕ್ರಮ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದರು. ನಂತರ 2004-2007 ಜಮ್ಮು ಕಾಶ್ಮೀರದ ನೌಸೆರಾ ಸೆಕ್ಟರ್, 2007-2010ವರೆಗೆ ಸ್ಕೂಲ್ ಆಫ್ ಆರ್ಟಿಲರಿ 2010-2014 ರವರೆಗೆ ಕಟಿಯಾರ್ ಬಿಹಾರ್, 2014-2017 ಔರಂಗಾಬಾದ್ ಮಹಾರಾಷ್ಟ್ರ, 2017-2019 ಸಿಯಾಚಿನ್ ಗ್ಲೇಸಿಯರ್, 2019-2022 ಸಿಕಂದರಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ನ್ಯಾಯವಾದಿ ರಾಘವೇಂದ್ರ ನಾಯಕ್ ಉಪ್ಪಿನಂಗಡಿ, ಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ಕುಂಟಿನಿ, ಚಿದಾನಂದ ಪೂಜಾರಿ ಮಹಾಲಿಂಗೇಶ್ವರ ವುಡ್ ವರ್ಕ್ಸ್ ಪಿಲಿಗೂಡು, ಶ್ರೀರಾಮಾಂಜನೇಯ ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಪಿಲಿಗೂಡು, ರಿಕ್ಷಾ ಚಾಲಕ ಮಾಲೀಕರು ಉಪ್ಪಿನಂಗಡಿ, ಜೀಪು ಚಾಲಕ ಮಾಲೀಕರು ಉಪ್ಪಿನಂಗಡಿ, ರಮೇಶ್ ಕಟಿಲೇಶ್ವರಿ ಹೂ ಮಾಲೀಕರು ಉಪ್ಪಿನಂಗಡಿ, ಮಾಜಿ ಸೈನಿಕ ರತ್ನಾಕರ ಇಚ್ಲಂಪ್ಪಾಡಿ, ರಮಾನಂದ ಕೆ. ಆದರ್ಶಮನೆ ನೆಲ್ಯಾಡಿ, ಕೃಷ್ಣಪ್ಪ ನಾಯ್ಕ್ ಹಾಗೂ ಉಪ್ಪಿನಂಗಡಿ ಆರಕ್ಷಕ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.