ಹೈದರಾಬಾದ್; ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ನ ಬೇಗುಂ ಬಜಾರ್ನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಅನ್ಯ ಜಾತಿಯ ಯುವತಿಯ ಜೊತೆಗಿನ ಪ್ರೇಮ ವಿವಾಹವೇ ಕಾರಣ ಎಂದು ಯುವಕನ ಕುಟುಂಬ ಆರೋಪಿಸಿದೆ.
ಮೃತ ಯುವಕನನ್ನು ನೀರಜ್ ಪನ್ವಾರ್ (21) ಎಂದು ಗುರುತಿಸಲಾಗಿದೆ. ಈತ ಬೇರೊಂದು ಜಾತಿಯ ಯುವತಿಯನ್ನು ಮದುವೆ ಆಗಿದ್ದ.ವಿರೋಧದ ನಡುವೆಯೂ ಮದುವೆಯಾಗಿದ್ದ. ಪನ್ವಾರ್ ದಂಪತಿಗೆ ಎರಡೂವರೆ ತಿಂಗಳ ಹಸಿಗೂಸಿದೆ. ಐದು ಮಂದಿಯ ಗ್ಯಾಂಗ್ ಯುವಕನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದೆ. ಯುವತಿಯ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನೀರಜ್ ಕೊಲೆಗೆ ಪ್ರೀತಿ ಮಾಡಿ ವಿವಾಹವಾಗಿರುವುದೇ ಕಾರಣ ಎಂದು ಪನ್ವಾರ್ ಕುಟುಂಬ ಆರೋಪಿಸಿದೆ.