ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೀತಿ, ಪ್ರೇಮ ಸಂಬಂಧಗಳು ಎಷ್ಟೊಂದು ಟೊಳ್ಳಾಗಿರುತ್ತವೆ ಅನ್ನುವುದಕ್ಕೆ ಇಲ್ಲೊಂದು ಪರ್ಫೆಕ್ಟ್ ಎಕ್ಸಾಂಪಲ್ ಇದೆ. ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಮೆಸೆಂಜರ್ ನಲ್ಲಿ ಗಂಟೆಗಟ್ಟಲೆ ಚಾಟ್ ಮಾಡಿ ಲಕ್ಷ ..ಲಕ್ಷ ಹಣ ಕೊಟ್ಟ ನಂತರ ಯುವಕನೊಬ್ಬನಿಗೆ ಮದುವೆ ಮನೆಯಲ್ಲಿ ಸತ್ಯ ತಿಳಿದ ಘಟನೆ ನಡೆದಿದೆ.
ಇದು ರವಿಚಂದ್ರನ್ ನಟನೆಯ ಯಾರೇ ನೀನು ಚೆಲುವೆ ಸಿನಿಮಾ ನೆನಪಿಸುವಂಥಹ ರೋಚಕ ಸ್ಟೋರಿ. ಆದರೆ ಅದು ಕಾಗದಲ್ಲಿ ಹುಟ್ಟಿದ ಪ್ರಾಮಾಣಿಕ ಪ್ರೀತಿಯ ಕಥೆ. ಇದು ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾಗದೆ ಫೇಸ್ ಬುಕ್ ನಲ್ಲಿ ಹುಟ್ಟಿ ಮೋಸದಲ್ಲಿ ಅಂತ್ಯವಾದ ಕಥೆ. ಅದು ಸಕ್ಸಸ್ ಸ್ಟೋರಿ, ಇದು ದುರಂತ ಅಂತ್ಯ ಕಂಡ ಕಥೆ. ಮದುವೆ ಮಂಟಪದಲ್ಲಿ ತಾಳಿ ಕಟ್ಟಲು ಹೊರಟ್ಟಿದ ಹುಡುಗ ಮದುವೆ ಮನೆಯಲ್ಲಿ ಪೇಚಿಗೆ ಸಿಲುಕಿದ ಸ್ವಾರಸ್ಯಕರ ಸ್ಟೋರಿಯಾಗಿದೆ.
ಫೇಸ್ಬುಕ್ನಲ್ಲಿ ಆರಾಮವಾಗಿ ಚಾಟ್ ಮಾಡುತ್ತ ಕಾಲ ಕಳೆಯುತ್ತಿದ್ದ ಯುವಕನೊಬ್ಬನಿಗೆ ಕಮಲ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಡಿಸ್ ಪ್ಲೇ ಮೇಲೆ ಆಕೆಯ ಫೋಟೋವನ್ನು ನೋಡಿ ಈ ಯುವಕ ಹಾಗೆಯೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಸುಂದರ ಹುಡುಗಿ ಸಿಕ್ಕಳೆಂದು ಆಕೆ ಜೊತೆ ಬಿಂದಾಸ್ ಆಗಿ ಮಾತನಾಡಲು ತೊಡಗಿದ್ದಾನೆ, ಬಳಿಕ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಮೆಸೆಂಜರ್ ನಲ್ಲಿ ಫೂಲ್ ಚಾಟಿಂಗ್ ಮಾಡಿದ್ದಾರೆ. ಯುವತಿ ಎಂದು ಪ್ರೀತಿ ಬಲೆಗೆ ಬೀಳಿಸಿದ್ದು ಮಾತ್ರ ಯುವತಿಯಲ್ಲ ಎಂಬ ಕಹಿ ಸತ್ಯ ಗೊತ್ತಾಗಿದ್ದೇ ಮದುವೆ ಮಂಟಪದಲ್ಲಿ. ಸುಂದರವಾದ ಯುವತಿಯ ಫೋಟೋ ಬಳಸಿಕೊಂಡು, ಫೇಸ್ಬುಕ್ ತೆರೆಯ ಹಿಂದೆ ಆಟವಾಡಿದ್ದು 50 ವರ್ಷದ ಆಂಟಿ ಅನ್ನುವುದು ವಿಶೇಷ. ಯುವಕನಿಗೆ ಮದುವೆಯಾಗುವುದಾಗಿ ಹೇಳಿ 3.50 ಲಕ್ಷ ಹಣ ಪಡೆದಿದ್ದಳು. ಮದುವೆ ಮಂಟಪದ ತನಕ ವಿವಿಧ ನವರಂಗಿ ನಾಟಕವಾಡಿದ್ದಳು. ಕೊನೆಗೆ ಅನುಮಾನಗೊಂಡ ಯುವಕ ಕುಟುಂಬಸ್ಥರು ಈಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಸಲಿ ಸತ್ಯ ತಿಳಿಯಿತು. ತಾನೇ ಹುಡುಗನಿಗೆ ಮೋಸ ಮಾಡಿರುವುದಾಗಿ ಒಪ್ಪಿದ ಈ ಮಹಿಳೆ ಬಳಿಕ ಹಣ ವಾಪಸ್ ಕೊಡುವ ಭರವಸೆ ನೀಡಿ ರಾಜಿ ಮಾಡಿಕೊಂಡಿದ್ದಾಳೆ. ಅಲ್ಲದೇ ಯುವಕನಿಗೆ ಪೊಲೀಸರು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ.