ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಲೆ ಕುಡಿಯ ಜನಾಂಗದ ಪಂಚ ಪರ್ವ ಸಿಬ್ಬಂದಿ ಸೇವೆಯಿಂದ ವಜಾಗೊಳಿಸಿದ್ದರ ವಿರುದ್ಧ ಉಗ್ರ ಪ್ರತಿಭಟನೆ ನಡೆಯಿತು.
ಮಲೆಕುಡಿಯ ಹಿತ ರಕ್ಷಣೆಯ ವೇದಿಕೆಯ ಸಂಚಾಲಕ ಪದ್ಮಕುಮಾರ ಗುಂಡಡ್ಕ ಪ್ರಸ್ತಾವಿಕವಾಗ ಮಾತನ್ನಾಡಿ ದೇವಸ್ಥಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವಾಗ ಭಕ್ತಿಯಿಂದ ಸೇವೆ ಸಲ್ಲಿಸಿದ ಜನಾಂಗ ಮಲೆಕುಡಿಯ ಜನಾಂಗ, ಕಳೆದ ಎರಡೂ ತಿಂಗಳಿನಿಂದ ಹಠಾತ್ ಸೇವೆಯಿಂದ ವಜಾಗೊಳಿಸಿದ್ದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು. ಮಲೆನಾಡು ಹಿತ ರಕ್ಷಣ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯ ಇಪ್ಪತ್ತೇಳು ಜನರನ್ನು ಸೇವೆಯಿಂದ ವಜಾಗೊಳಿಸಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಕಿಡಿಕಾರಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾಣಿ ಕುಕ್ಕೆ ಸುಬ್ರಹ್ಮಣ್ಯ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಅಶೋಕ ಆಚಾರ್ಯ ಸಚಿನ್ ವಳಲಂಬೆ ಉಪಸ್ಥಿತರಿದ್ದರು.