ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ತಮ್ಮ ಸಂಸ್ಥೆಯ ಬಸ್ ಗಳು ಅಪಘಾತವಾಗುವುದಕ್ಕೆ ನೈಜ ಕಾರಣಗಳು ಏನು ಅನ್ನುವುದನ್ನು ಬಹಿರಂಗ ಪಡಿಸಿದೆ. ಮಾತ್ರವಲ್ಲ ಅಪಘಾತಗಳು ಯಾರಿಂದ ಹೇಗೆ ನಡೆಯುತ್ತಿದೆ ಅನ್ನುವುದನ್ನು ಕೂಡ ಚಿಂತನ-ಮಂಥನ ಸಭೆಯಲ್ಲಿ ಸ್ಪಷ್ಟಪಡಿಸಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ಕೆ ಎಸ್ ಆರ್ ಟಿಸಿಯ 80 ಬಸ್ ಅಪಘಾತಗಳಲ್ಲಿ ಹೆಚ್ಚಿನವು 40ರಿಂದ 50 ವರ್ಷ ವಯಸ್ಸಿನ ಚಾಲಕರಿಂದ ಸಂಭವಿಸಿದೆ. ಇದನ್ನು ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ನಿಗಮದ ವ್ಯವವ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಚಾಲನಾ ಸಿಬ್ಬಂದಿ ಜತೆ ಸಂವಾದ ನಡೆಸಿದರು.
ಜನವರಿಯಿಂದ ಏಪ್ರಿಲ್ ನಡುವೆ 80 ಮಾರಣಾಂತಿಕ ಅಪಘಾತ ಗಳು ವರದಿಯಾಗಿವೆ. ಶೇ 39ರಷ್ಟು ಅಪಘಾತಗಳು 40 ರಿಂದ 50 ವರ್ಷ ವಯಸ್ಸಿನ ಚಾಲಕರಿಂದಲೇ ಉಂಟಾಗಿವೆ. ಶೇ 23ರಷ್ಟು ಅಪಘಾತಗಳು 36 ರಿಂದ 40 ವರ್ಷ ವಯಸ್ಸಿನ ಚಾಲಕರಿಂದ ಉಂಟಾಗಿವೆ. ಸಾವು-ನೋವುಗಳ ಪ್ರಮಾಣ ವನ್ನು ಅವಲೋಕಿಸಿದಾಗ ಶೇ44 ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು ಶೇ19 ಅಪಘಾತಗಳು ಪಾದಚಾರಿ ಗಳು, ಶೇ27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ ಸಂಭವಿಸಿವೆ ಎಂದು ಕೆ ಎಸ್ ಆರ್ ಟಿಸಿ ಅವಲೋಕಿಸಿದೆ.