ನ್ಯೂಸ್ ನಾಟೌಟ್: ಕೊಯನಾಡು ಸಮೀಪದ ಓಲ್ಡ್ ಟಿಂಬರ್ ಡಿಪೋ ಬಳಿ ಭಾರಿ ಗಾತ್ರದ ಬುರ್ಗಾ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಉರುಳಿ ಬಿದ್ದುದ್ದರಿಂದ ಎರಡು ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ ಘಟನೆ ಇಂದು ಮಧ್ಯಾಹ್ನ 2.30 ರ ಸುಮಾರಿಗೆ ನಡೆದಿದೆ.
ಘಟನೆಯಲ್ಲಿ ವಿದ್ಯುತ್ ಕಂಬಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ತೊಂದರೆಯಾಗಿಲ್ಲ. ಸಂಪಾಜೆ ರೇಂಜ್ ಆಫೀಸ್ ವ್ಯಾಪ್ತಿಯಿಂದ ಮುಂದಕ್ಕೆ ಮಡಿಕೇರಿ ಹಾದು ಹೋಗುವ ರಸ್ತೆಯ 2 ಕಿ.ಮೀ. ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಿಡಿ ವೈ ಆರ್ ಎಫ್ ಒ ವಿಜೇಂದ್ರ ಕುಮಾರ್ ನೇತೃತ್ವದ ಜನಾರ್ಧನ್ , ಪುನೀತ್, ನಾಗರಾಜ್, ಸಿದ್ದೇಶ್, ಭರತ್ ಮತ್ತಿತರನ್ನು ಒಳಗೊಂಡ ಅರಣ್ಯಾಧಿಕಾರಿಗಳ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಬೃಹತ್ ಮರವನ್ನು ತೆರವುಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ನೆರವಾದರು.