ನ್ಯೂಸ್ ನಾಟೌಟ್: ಪಾಕಿಸ್ತಾನದ ಮಹಿಳಾ ಏಜೆಂಟ್ ಜೊತೆಗೆ ದೇಶದ ರಕ್ಷಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಂಡ ಯೋಧನೊಬ್ಬನನ್ನು ಆರೆಸ್ಟ್ ಮಾಡಲಾಗಿದೆ. ಹನಿಟ್ರ್ಯಾಪ್ ಗೆ ಒಳಗಾದ ಯೋಧ ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಧ ಹನಿಟ್ರ್ಯಾಪ್ ಆಗಿದ್ದು ಹೇಗೆ?
ಜೋದ್ ಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸaಲಾಗಿದ್ದ ಯೋಧ ಪ್ರದೀಪ್ ಕುಮಾರ್ ಪಾಕ್ ಮಹಿಳಾ ಏಜೆಂಟ್ ಜೊತೆಗೆ ಸಂಪರ್ಕದಲ್ಲಿದ್ದರು. ಕಳೆದ ಕೆಲ ದಿನಗಳಿಂದ ಅವರ ಮೇಲೆ ತೀವ್ರ ನಿಗಾ ವಹಿಸಿ, ಇದೀಗ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ಪಾಕ್ ಮಹಿಳೆ ಜೊತೆಗೆ ಸಂಪರ್ಕ ಸಾಧಿಸಿರುವ ಯೋಧ ಆಕೆಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ. ವಿಚಾರಣೆಗಾಗಿ ಮೇ 18 ರಂದು ಆರೋಪಿಯನ್ನು ವಶಕ್ಕೆ ಪಡೆದು ನಂತರ ಬಂಧಿಸಲಾಗಿದೆ.
ಕಳೆದ ಆರು ತಿಂಗಳ ಹಿಂದೆ ಯೋಧನ ಮೊಬೈಲ್ ಗೆ ಕರೆ ಮಾಡಿರುವ ಮಹಿಳೆ ತಾನು ಬೆಂಗಳೂರಿನ ಮಿಲಿಟರಿ ನರ್ಸಿಂಗ್ ಸೇವಾ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾಳೆ. ದೆಹಲಿಯಲ್ಲಿ ತನನ್ನು ಭೇಟಿಯಾಗುವಂತೆ ಹಾಗೂ ಮದುವೆಯಾಗುವಂತೆ ಪ್ರಸ್ತಾಪಿಸಿದ್ದಾಳೆ. ಕುಮಾರ್ ಒಂದು ಸಲ ಹನಿಟ್ರ್ಯಾಪ್ ಗೆ ಬಿದ್ದ ನಂತರ ಸೋಶಿಯಲ್ ಮೀಡಿಯಾ ಮೂಲಕ ಆಕೆ ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ.