ನವದೆಹಲಿ: ಶುಕ್ರವಾರ ನವದೆಹಲಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಗಬಹುದಾದ ಹೆಚ್ಚಿನ ಜೀವ ಹಾನಿಯನ್ನು ಕ್ರೇನ್ ಆಪರೇಟರ್ ಒಬ್ಬರು ತಪ್ಪಿಸಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ 50ಕ್ಕೂ ಹೆಚ್ಚು ಮಂದಿಯನ್ನು ಕ್ರೇನ್ ಆಪರೇಟರ್ ದಯಾನಂದ ತಿವಾರಿ ಎಂಬುವವರು ರಕ್ಷಿಸಿದ್ದಾರೆ.
‘ನಾನು ಮುಂಡ್ಕ ಉದ್ಯೋಗ ನಗರದಿಂದ ಬರುತ್ತಿದ್ದಾಗ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ರೇನ್ ಸಹಾಯದಿಂದ ನಾವು ಸುಮಾರು 50-55 ಜನರನ್ನು ರಕ್ಷಿಸಿದೆವು. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು’ ಎಂದು ತಿವಾರಿ ತಿಳಿಸಿದ್ದಾರೆ. ನಾವೆಲ್ಲ ರಕ್ಷಣಾ ಕಾರ್ಯ ಆರಂಭಿಸಿ ಒಂದೂವರೆ ಗಂಟೆ ನಂತರ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದವು ಎಂದು ಹೇಳಿದರು. ನವದೆಹಯ ಮುಂಡ್ಕಾ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದರು.