ನ್ಯೂಸ್ ನಾಟೌಟ್: ವಿಪರೀತ ಅಮಲು ಪದಾರ್ಥದ ಚಟ ಹೊಂದಿದ್ದ ವ್ಯಕ್ತಿಯೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಜಿರೆ ಗ್ರಾಮದ ಸದರ್ನ್ ರಬ್ಬರ್ ಅಂಗಡಿ ಬಳಿ ಮೇ.5ರಂದು ನಡೆದಿದೆ. ಮೃತಪಟ್ಟ ವ್ಯಕ್ತಿ ಬಿಹಾರ ಮೂಲದ ಬಬ್ಲು ಸಿಂಗ್(39) ಎಂದು ತಿಳಿದು ಬಂದಿದೆ.
ಈತ ಪ್ರೈಸ್ ಮ್ಯಾಥ್ಯೂ ಎಂಬವರ ಸದರ್ನ್ ರಬ್ಬರ್ ಅಂಗಡಿಯಲ್ಲಿ ರಬ್ಬರ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ. ಅಂಗಡಿಯ ಹಿಂಬದಿಯಲ್ಲಿರುವ ರೂಮಿನಲ್ಲಿ ನಂದಲಾಲ್ ಮತ್ತು ಶಿವಾನಂದ ಎಂಬವರೊಂದಿಗೆ ವಾಸವಾಗಿದ್ದ. ವಿಪರೀತ ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದ ಆತ ಮೇ.5 ರಂದು ತನ್ನ ರೂಮಿನ ಪಕ್ಕದಲ್ಲಿರುವ ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದುಸಾವನ್ನಪ್ಪಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.