ನ್ಯೂಸ್ ನಾಟೌಟ್: ಮದುವೆ ಸಂಭ್ರಮದಲ್ಲಿದ್ದ ವರನಿಗೆ ವಧು ಮದುವೆ ಮಂಟಪದಲ್ಲಿ ಬೆವರಿಳಿಸಿದ ಘಟನೆ ನಡೆದಿದೆ. ವರ ಪೋಟೊಗ್ರಾಫರ್ ಕರೆತರಲಿಲ್ಲ ಎಂದು ವಧು ಮದುವೆಯನ್ನೇ ನಿಲ್ಲಿಸಿದ ಸುದ್ದಿ ವೈರಲ್ ಆಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಭಾನುವಾರ ನಡೆದಿದೆ.
ಮದುವೆ ಸಂದರ್ಭದಲ್ಲಿ ಫೋಟೊಗ್ರಾಫರ್ ಅವರನ್ನು ಕರೆದುಕೊಂಡು ಬರುವಂತೆ ವರನಿಗೆ ವಧು ಹೇಳಿದ್ದರು. ಆದರೆ ವರ ಕ್ಯಾಮೆರಾಮೆನ್ ನನ್ನು ಕರೆತಂದಿರಲಿಲ್ಲ. ಇದೇ ಕಾರಣಕ್ಕೆ ಕೋಪಿಸಿಕೊಂಡ ವಧು ಮದುವೆಯನ್ನು ನಿಲ್ಲಿಸಿದ್ದಾಳೆ. ಈ ಘಟನೆ ಕಾನ್ಪುರ ಜಿಲ್ಲೆ ಮಂಗಳಪುರದಲ್ಲಿ ನಡೆದಿದೆ. ವಧುವಿನ ಮನೆಯವರು, ಗೆಳತಿಯರು ಮತ್ತು ಆಪ್ತರು ಎಷ್ಟೇ ಮನವೋಲಿಸಿದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.