ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ , ಉಡುಪಿ ಈ ಎರಡೂ ಜಿಲ್ಲೆಗೆ ಬುದ್ಧಿವಂತರ ನಾಡು ಎಂಬ ಹೆಸರಿದೆ. ಇಲ್ಲಿನ ಜನ ವ್ಯಕ್ತಿಗಿಂತ ವಿಚಾರಕ್ಕೆ ಹಿಂದುತ್ವಕ್ಕೆ ಬದ್ಧವಾಗಿ ಮತ ಚಲಾಯಿಸುತ್ತಾರೆ. ಇಂತಹ ಬಿಜೆಪಿ ಪಕ್ಷದ ಭದ್ರಕೋಟೆ ಕರಾವಳಿಯಲ್ಲಿ ಇದೀಗ ಅಪಸ್ವರ ಕೇಳಿ ಬಂದಿದೆ. ಸ್ವತಃ ಬಿಜೆಪಿಗರಿಂದಲೇ ಪಕ್ಷದ ಪ್ರಾಮಾಣಿಕ ನಾಯಕರನ್ನು ತುಳಿಯುವ ಪ್ರಯತ್ನ ನಡೆಯುತ್ತಿವೆ ಅನ್ನುವ ದೂರುಗಳು ಕೇಳಿ ಬರುತ್ತಿವೆ.
ಸ್ವ ಹಿತಾಸಕ್ತಿ, ಸ್ವಾರ್ಥ ರಾಜಕಾರಣದಿಂದಾಗಿ ಬೆಳೆಯಬೇಕಿದ್ದ ಎಷ್ಟೋ ನಾಯಕರು ಈಗ ಪಕ್ಷದಿಂದ ದೂರವಾಗಿ ಬಿಟ್ಟಿದ್ದಾರೆ. ಸತ್ಯಜಿತ್ ಸುರತ್ಕಲ್, ತಿಮರೋಡಿ, ಪುತ್ತಿಲ್ಲ, ವಿಶ್ವೇಶ್ವರ ಭಟ್ಟರಂತಹ ನಾಯಕರನ್ನು ಕೆಲವು ಕರಾವಳಿಯ ನಾಯಕರು ಸೇರಿಕೊಂಡು ವ್ಯವಸ್ಥಿತವಾಗಿ ರಾಜಕೀಯವಾಗಿ ಮುಗಿಸಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಉಡುಪಿಯಲ್ಲಿ ಹಿಜಾಬ್ ವಿಚಾರದಲ್ಲಿ ಕೊನೆಯ ಕ್ಷಣದ ತನಕ ಗಟ್ಟಿಯಾಗಿ ನಿಂತು ಈ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದು ಯಶ್ ಪಾಲ್ ಸುವರ್ಣ, ಈ ವಿಚಾರದಿಂದ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಗೆ ಒಂದು ಹವಾ ಕ್ರಿಯೆಟ್ ಆಗಿದ್ದು ಸುಳ್ಳಲ್ಲ, ಉತ್ತರ ಪ್ರದೇಶ ಚುನಾವಣೆಯಲ್ಲೂ ಸುದ್ದಿ ಮಾಡಿತ್ತು, ತದ ನಂತರ ಹೈಕೋರ್ಟ್ ಕೂಡ ಹಿಜಾಬ್ ಧರಿಸಿ ಬಾರದಂತೆ ತೀರ್ಪು ನೀಡಿತ್ತು, ಈಗ ಅದೇ ಸುವರ್ಣ ಅವರನ್ನು ರಾಜಕೀಯವಾಗಿ ಇಲ್ಲವಾಗಿಸೋಕೆ ತಂತ್ರ ಹೆಣೆಯಲಾಗುತ್ತಿದ್ದು ಸ್ವತಃ ಬಿಜೆಪಿಯ ಕರಾವಳಿಯ ಕೆಲವು ನಾಯಕರು ಇದರಲ್ಲಿ ಪ್ರಮುಖವಾಗಿ ಮುಂದಿದ್ದಾರೆ ಎನ್ನಲಾಗುತ್ತಿದೆ. ಪ್ರಮೋದ್ ಮಧ್ವರಾಜ್ ನನ್ನು ಬಿಜೆಪಿ ಸೇರಿಸಿ ಕಾಯಂ ಆಗಿ ಯಶ್ ಪಾಲ್ ಮುಗಿಸುವ ತಂತ್ರ ಹೆಣೆಯಲಾಗುತ್ತಿದೆ ಎಂದು ಉಡುಪಿಯಲ್ಲಿ ಬಿಜೆಪಿಯ ಕಾರ್ಯಕರ್ತರ ಗುಂಪೊಂದು ಆಕ್ರೋಶ ಹೊರ ಹಾಕಿದೆ. ಒಟ್ಟಿನಲ್ಲಿ ಈ ವಿಚಾರ ಮುಂದೆ ಎಲ್ಲಿ ತನಕ ತಲುಪುತ್ತದೋ ಅನ್ನುವುದನ್ನು ಕಾದು ನೋಡಬೇಕಿದೆ.