ನ್ಯೂಸ್ ನಾಟೌಟ್: ಸರಕಾರಿ ಶಾಲೆಗೆ ಬೀಫ್ ತೆಗೆದುಕೊಂಡು ಬಂದಿದ್ದ ಮುಖ್ಯೋಪಾಧ್ಯಾಯರನ್ನು ಜೈಲಿಗೆ ಕಳಿಸಲಾಗಿದೆ.
ಅಸ್ಸಾಂ ನ ಗೋವಾಲ್ಪಾರ ಜಿಲ್ಲೆಯ ಲಖಿಪುರ್ ಪ್ರದೇಶದಲ್ಲಿರುವ ಹುರ್ಕಚುಂಗಿ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ದಲಿಮಾ ನೆಸ್ಸಾ ಎಂಬುವವರು ಮಧ್ಯಾಹ್ನದ ಊಟಕ್ಕೆ ಬೀಫ್ ತಂದಿದ್ದರು. ಅಷ್ಟೇ ಅಲ್ಲದೇ ತಾವು ತಿನ್ನುವುದರ ಜೊತೆಗೆ ಸಹೋದ್ಯೋಗಿಗಳೊಂದಿಗೂ ಆಹಾರವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕವಾಗಿ ಬೀಫ್ ತಿಂದಿರುವುದು ಕೆಲವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬ ಆಕ್ಷೇಪ ಸಹೋದ್ಯೋಗಿಗಳಿಂದ ವ್ಯಕ್ತವಾಗತೊಡಗಿದೆ. ಈ ವಿಷಯ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಾಲೆಯ ಆಡಳಿತ ಸಮಿತಿ ದೂರು ದಾಖಲಿಸಿದೆ. ಐಪಿಸಿ ಸೆಕ್ಷನ್ 153 ಎ ಹಾಗೂ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷಕಿಯನ್ನು ಬಂಧಿಸಿದ್ದಾರೆ.