ನ್ಯೂಸ್ ನಾಟೌಟ್: ಪ್ರತಿ ಮಳೆ ಗಾಲದಲ್ಲಿ ಜಲಾವೃತಗೊಳ್ಳುವ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಜನರು ಹಾಗೂ ಭಕ್ತರ ಅನುಕೂಲಕ್ಕಾಗಿ ರೂಪಿಸಲಾದ ಮೇಲುಸೇತುವೆ ಯೋಜನೆಯನ್ನು ರಾಜ್ಯ ಬಿಜೆಪಿ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಪ್ರಮುಖರು ಆರೋ ಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಕ್ತಾರ ಪಿ.ಎಲ್.ಸುರೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಸುನೀಲ್ ಪತ್ರವೋ ಹಾಗೂ ಮಹಮ್ಮದ್ ಹಾರೀಸ್ ಸರಕಾರದ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದ್ದು, ಸ್ಥಳೀಯರು ಕಷ್ಟ ಅನುಭವಿಸುವಂತಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಮಳೆ ಯಿಂದ ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ. ಜನರು ಹಾಗೂ ಭಕ್ತರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ಅಂದಿನ ಜಿಲ್ಲಾಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಭಕ್ತರ ಅನುಕೂಲಕ್ಕಾಗಿ ಮೇಲುಸೇತುವೆ ಯೋಜನೆಯನ್ನು ರೂಪಿಸಿ ಹಣ ಬಿಡುಗಡೆ ಮಾಡಿಸಿದರು. ಕಾಮಗಾರಿ ಕೂಡ ಆರಂಭಗೊಂಡಿತ್ತಾದರೂ ನಂತರ ಬಂದ ಬಿಜೆಪಿ ನೇತೃತ್ವದ ಸರಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಜಿಲ್ಲೆಯ ಶಾಸಕರುಗಳಿಗೆ, ಉಸ್ತು ವಾರಿ ಸಚಿವರಿಗೆ ಈ ಯೋಜನೆಯ ಬಗ್ಗೆ ಕಾಳಜಿ ಇಲ್ಲದಾಗಿದೆ. ಇದರ ಪರಿಣಾಮ 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂ ಡಿಲ್ಲ, ಅಲ್ಲದೆ ಜನರು ಹಾಗೂ ಭಕ್ತರು ಇಲ್ಲಿನ ಅವ್ಯವಸ್ಥೆಯಿಂದ ನಿತ್ಯ ಕಷ್ಟ ಅನುಭವಿಸುವಂತ್ತಾಗಿದೆ ಎಂದು ಆರೋಪಿಸಿದರು. ಸ್ಥಳೀಯರ ಒತ್ತಾಯಕ್ಕೆ ಮಣಿದು ಜೂನ್ ಮೊದಲ ವಾರದಲ್ಲಿಕಾಮಗಾರಿಯನ್ನು ಪೂರ್ಣಗೊ ಳಿಸುವ ಭರವಸೆ ದೊ ರೆಯಿತಾದರೂ ಇಲ್ಲಿಯವರೆಗೆ ಕಾಮಗಾರಿ ವೇಗವನ್ನು ಪಡೆದುಕೊಂಡಿಲ್ಲ. ಭಕ್ತರ ಹಿತದೃಷ್ಟಿಯಿಂದ ಉಸ್ತುವಾರಿ ಸಚಿವರು ಹಾಗೂ ಶಾಸಕರು ಹೆಚ್ಚು ಆಸಕ್ತಿ ತೋ ರಿ ಮೇಲು ಸೇತುವೆ ಯೋಜನೆಯನ್ನು ಪೂರ್ಣಗೊಳಿಸಲು ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದರು.