ನ್ಯೂಸ್ ನಾಟೌಟ್ : ಉಪ್ಪಿನಂಗಡಿ ಸಮೀಪದ ಹಳೆಗೇಟು ಎಂಬಲ್ಲಿ, ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 50 ಅಡಿ ಆಳಕ್ಕೆ ಆಟೋ ರಿಕ್ಷಾವೊಂದು ಬಿದ್ದಿದ್ದು, ಚಾಲಕ ಗಾಯಗೊಂಡ ಘಟನೆ ನಡೆದಿದೆ.
ಹಳೆಗೇಟು ಎಂಬಲ್ಲಿ ಹೆದ್ದಾರಿಯಿಂದ ನೇರವಾಗಿ ನದಿ ದಡಕ್ಕೆ ರಿಕ್ಷಾ ಬಿದ್ದಿದ್ದು, ರಿಕ್ಷಾ ನುಜ್ಜುಗುಜ್ಜಾಗಿದೆ. ನಟ್ಟಿಬೈಲ್ ನಿವಾಸಿ ಚೆಲುವ ಎಂಬವರು ಚಲಾಯಿಸಿಕೊಂಡು ಹೋಗುವಾಗ ಹಠತ್ತಾನೆ ಪಲ್ಟಿ ಆಗಿದೆ. ಹೆದ್ದಾರಿ ಅಂಚಿನಿಂದಲೇ ಪಲ್ಟಿ ಹೊಡೆದುಕೊಂಡು ನದಿ ದಡದಲ್ಲಿ ನಿಂತಿದೆ. ಪಲ್ಟಿ ಆಗಿ ಬಿದ್ದಿರುವ ಜಾಗದಲ್ಲಿ ಕುರುಚಲು ಗಿಡಗಂಟಿ ಇದ್ದುದರಿಂದಾಗಿ ಚಾಲಕ ಚೆಲುವ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.