ನ್ಯೂಸ್ ನಾಟೌಟ್: ಕನ್ನಡದ ಅತ್ಯಂತ ಸಕ್ಸಸ್ ಫುಲ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಡೆದ ಬಾಲಿವುಡ್ ನಿರ್ದೆಶಕ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಮಗೆ ಸರಿಹೊಂದದ ಉಡುಗೆ ತೊಟ್ಟು ಮುಜುಗರ ಅನುಭವಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ, ಆಕರ್ಷಕ ಕಪ್ಪು ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಮೆರಾ ಮುಂದೆ ಅವರು ತಮ್ಮ ಉಡುಗೆಯಿಂದ ಕೊಂಚ ಕಸಿವಿಸಿಗೆ ಒಳಗಾದಂತೆ ಕಂಡುಬಂತು. ಅಲ್ಲದೆ, ತಮ್ಮ ಉಡುಪನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಈ ವಿಡಿಯೊವನ್ನು ಸೆಲೆಬ್ರಿಟಿ ಫೋಟೊಗ್ರಾಫರ್ ವಿರಲ್ ಬಯಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕೂಡಲೇ ವೈರಲ್ ಆಗುವ ಜೊತೆಗೆ ಟ್ರೋಲ್ ಸಹ ಆಗಿದೆ. ಈ ವಿಡಿಯೊಗೆ ಕಾಮೆಂಟ್ ಮಾಡಿರುವ ಜಾಲತಾಣಿಗರು, ತಮಗೆ ಸರಿಹೊಂದದ ಉಡುಪನ್ನು ಅವರು ಧರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಆ ಉಡುಪು ನಿಜಕ್ಕೂ ಸರಿಹೊಂದುತ್ತಿಲ್ಲ. ಅದು ಅವರ ಹಾವಭಾವದಿಂದ ತಿಳಿಯುತ್ತಿದೆ ಎಂಬಿತ್ಯಾದಿ ಕಾಮೆಂಟ್ ಮಾಡಿದ್ದಾರೆ.