ಸುಳ್ಯ: ಸಾಮಾನ್ಯವಾಗಿ ಶಬರಿಮಲೆಗೆ ಹೋದವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ವಾಪಸ್ ಬರುತ್ತಾರೆ. ಆದರೆ ಸುಳ್ಯದ ತಂಡವೊಂದು ಶಬರಿಮಲೆಯ ದೇವರ ದರ್ಶನಕ್ಕೆಂದು ಹೋದವರು ಪಂಪಾ ನದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಭಾರಿ ಸುದ್ದಿಯಾಗಿದ್ದಾರೆ.
ಸುಳ್ಯದ ಸಂತೋಷ್ ಗುರುಸ್ವಾಮಿ ನೇತೃತ್ವದ ತಂಡದಿಂದ ಪಂಪಾ ನದಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆದಿದ್ದು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಶಬರಿಮೆಲೆಗೆ ಹೋದವರು ಅಯ್ಯಪ್ಪ ಸ್ವಾಮಿಯ ದರ್ಶನದ ಜತೆಗೆ ಪಂಪಾ ನದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ದೇಶದ ಯಾತ್ರಾರ್ಥಿಗಳಿಗೆ ಮಾದರಿಯಾಗಿರುವುದು ವಿಶೇಷ.
ಸುಳ್ಯದ ಸಂತೋಷ್ ಗುರುಸ್ವಾಮಿ ನೇತೃತ್ವದ ತಂಡ ಪಂಪಾ ನದಿಯಲ್ಲಿ, ಯಾತ್ರೆಗೆ ಬಂದು ಭಕ್ತಾದಿಗಳು ಬಿಟ್ಟುಹೋದ ಪ್ಲಾಸ್ಟಿಕ್ ಬಾಟಲ್,ಬಟ್ಟೆ, ಟವೆಲ್, ಇನ್ನಿತರ ಕಸಗಳನ್ನು ಸಂಗ್ರಹಿಸಿದ್ದಾರೆ. ಎ 13 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಸಂತೋಷ್ ಕಾನತ್ತಿಲ, ನ ಪಂ ಸದಸ್ಯ ಸುಧಾಕರ್ ಕುರುಂಜಿಬಾಗ್ ಸೇರಿದಂತೆ ಸುಳ್ಯ ತಾಲೂಕಿನ ಸುಮಾರು 48 ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿದ್ದರು. ಇವರೆಲ್ಲರ ಸಾಮಾಜಿಕ ಕಳಕಳಿಗೆ ನ್ಯೂಸ್ ನಾಟೌಟ್ ವೆಬ್ ಸೈಟ್ ಹಾಗೂ ಯೂ ಟ್ಯೂಬ್ ಚಾನಲ್ ಕಡೆಯಿಂದ ದೊಡ್ಡ ಸಲ್ಯೂಟ್…