ನೆಲ್ಯಾಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಪೇಟೆಯಲ್ಲಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ಭಾನುವಾರ ನಡೆದಿದೆ. ರಿಕ್ಷಾ ಚಾಲಕ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಪುತ್ತೂರಿಗೆ ಹೋಗುತ್ತಿದ್ದ ಎರ್ಟಿಗಾ ಕಾರು ಹಾಗೂ ಆರ್ಲದಿಂದ ನೆಲ್ಯಾಡಿಗೆ ಬರುತ್ತಿದ್ದ ಆಟೋ ರಿಕ್ಷಾದ ಮಧ್ಯೆ ನೆಲ್ಯಾಡಿ ಸಂತೆಕಟ್ಟೆ ಸಮೀಪ ಡಿಕ್ಕಿ ಸಂಭವಿಸಿದೆ. ರಿಕ್ಷಾ ಚಾಲಕ ಶಾಂತಿಬೆಟ್ಟು ನಿವಾಸಿ ರಿಜ್ವಾನ್ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.