ರಾಯಚೂರು: ಗುತ್ತಿಗೆ ದಾರ ಸಂತೋಷ್ ಸಾವಿನಿಂದ 40 ಪರ್ಸೆಂಟ್ ಕಮಿಷನ್ ವಿಚಾರ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು ಈಗಾಗಲೇ ಸಚಿವ ಕೆ.ಎಸ್ ಈಶ್ವರಪ್ಪ ಅವರ ತಲೆದಂಡವಾಗಿದೆ. ಈಶ್ವರಪ್ಪ ಮಾತ್ರ ಅಲ್ಲ ಇನ್ನೂ ಒಬ್ಬ ಪ್ರಭಾವಿ ಸಚಿವರೂ ಕೂಡ ಈ ಪ್ರಕರಣದಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆಯೇ? ಅನ್ನುವಂತಹ ಅನುಮಾನಗಳು ವ್ಯಕ್ತವಾಗುತ್ತಿದೆ. ಸ್ವತಃ ಇದನ್ನು ರಾಯಚೂರಿನಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಹೇಳಿ ಸಂಚಲನ ಮೂಡಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 15ರ ಸಂಜೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿಯಲ್ಲಿ ಈಶ್ವರಪ್ಪನವರದ್ದು ಮೊದಲನೇ ವಿಕೆಟ್, ಎರಡು ಮೂರು ದಿನ ಆದ ಮೇಲೆ ಎರಡನೇ ವಿಕೇಟ್ ಬೀಳೋದು ಇದೆ ಎಂದು ಸ್ಫೋ ಟಕ ಹೇಳಿಕೆ ನೀ ಡಿದ್ದಾರೆ. ಸಚಿವ ಡಾ.ಕೆ.ಸು ಧಾಕರ್ ವಿಕೆಟ್ ಕೂಡ ಬೀಳೋದು ಇದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಬಗ್ಗೆ ಹೇ ಳಿದ್ದಾರೆ. ಒಬ್ಬರದ್ದೇ ಮಿನಿಸ್ಟರ್ ಗಳ ಭ್ರಷ್ಟಾಚಾರ ಇವತ್ತು ಬಯಲಾಗ್ತಿದೆ. ಇದು 40 ಪರ್ಸೆಂಟ್ ಸರ್ಕಾರ ಅನ್ನೋದು ಸಾಬೀತಾಗಿದೆ. ಮುಖ್ಯಮಂತ್ರಿಗಳು ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.