- ಬಾಲಚಂದ್ರ ಕೋಟೆ, ಪತ್ರಕರ್ತರು
ಇಂದು ಅತೀ ಹೆಚ್ಚು ಪ್ರಚಲಿತದಲ್ಲಿರುವುದು ವಾಟ್ಸಪ್ ಮತ್ತು ಫೇಸುಬುಕ್ ಗಳಂತಹ ಸಾಮಾಜಿಕ ಜಾಲತಾಣಗಳು. ವಾಟ್ಸಪ್ ಹಾಗೂ ಫೇಸುಬುಕ್ ಕೇವಲ ಮಾಹಿತಿ ಅಥವಾ ವಾಸ್ತವಿಕತೆಯನ್ನು ಮಾತ್ರ ಪಸರಿಸುವುದಲ್ಲದೇ ಸಂಬಂಧವನ್ನೂ ಬೆಳೆಸಲು ಸೇತುವೆಯೂ ಆಗಬಲ್ಲದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ಈ ವಾಟ್ಸಪ್ ಕೊಟ್ಟ ಅಕ್ಕಂದಿರ ಕಥೆಯಾಗಿದೆ.
ಅಕ್ಕ-ತಮ್ಮನೆಂಬ ಸಂಬಂಧದ ಬೆಸುಗೆಯೇ ಒಂದು ಅದ್ಭುತ ಕಲ್ಪನೆ. ತಾಯಿಗೆ ಸಮಾನವಾದ ಪ್ರೇಮ, ವಾತ್ಸಲ್ಯಗಳನ್ನು ನಾವು ಅಕ್ಕಾ ತಮ್ಮ ಸಂಬಂಧದಲ್ಲಿ ಕಾಣಬಹುದು. ಈ ಸಂಬಂಧ ಒಂದೇ ತಾಯಿಯ ಗರ್ಭದಿಂದ ಜನಿಸಿದವರೇ ಆಗಬೇಕೆಂದಿಲ್ಲ. ಸಹೋದರ ಸಂಬಂಧದಲ್ಲಿ ಇರಬಹುದು, ಕುಟುಂಬ ಹಾಗೂ ಇನ್ಯಾವುದೋ ಮೂಲದಿಂದ ಇರಬಹುದು. ಆದರೆ ಇಲ್ಲಿ ಕೇವಲ ಪವಿತ್ರವಾದ ಸಹೋದರತ್ವ ಸಂಬಂಧವಷ್ಟೇ ಮುಖ್ಯ ವಹಿಸುತ್ತದೆ. ನನ್ನ ವಿಚಾರದಲ್ಲಿಯೂ ಇವುಗಳು ಅನ್ವಯಿಸುತ್ತದೆ.
ವಾಟ್ಸ್ಅಪ್ ಕೃಪಾ ಕಟಾಕ್ಷ ಫಲವಾಗಿ ಒಂದಲ್ಲ, ಮೂರು ಅಕ್ಕಂದಿರು ದೊರೆತರು. ಒಬ್ಬಳು ಸದಾ ಹುಸಿಗೋಪ ತೋರುತ್ತಾ ಬುದ್ದಿ ಹೇಳುವ ಮೂಲಕ ಮಮತೆ ತೋರುತ್ತಾಳೆ. ಇನ್ನೊಬ್ಬಳು ಧೈರ್ಯ ಹೇಳುತ್ತಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾಳೆ. ಮೂರನೆಯವಳು ತುಂಬಾ ಫ್ರೆಂಡ್ಲಿ.ತಮಾಷೆ ಮಾಡುವಳು, ವಾತ್ಸಲ್ಯ ತೋರುವಳು. ಇನ್ನೂ ಹೇಳಬೇಕೆಂದರೆ, ಮೂರೂ ಅಕ್ಕಂದಿರ ಪರಿಚಯದ ಅಂತರ ಕೇವಲ ವರ್ಷದಿಂದಷ್ಟೆ. ಆದರೆ ಮಮತೆಯ ತೂಕ ಅನೇಕ ವರ್ಷಗಳಿಗರ ಸಮವೆಂಬಂತಿದೆ.
ಸಂಬಂಧಗಳ ನಡುವೆ ಗಾಢತನಕ್ಕೆ ಹಿಂದಿನ ಕಾಲದಲ್ಲಿ ಪತ್ರಗಳೇ ಕಾರಣವಾಗುತ್ತಿದ್ದವು. ಇಂದು ಡಿಜಿಟಲ್ ಮಾಧ್ಯಮವೇ ಸೇತುವೆಯಾಗಿದೆ. ಒಂದು ಗುರ್ಡ್ ಮಾರ್ನಿಂಗ್ನಿಂದ ಆರಂಭವಾದ ಸಂಬಂಧ ಇಂದು ತಾಯಿ ಬೇರೆ ಸಂಬಂಧವೊಂದೇ ಎಂಬಷ್ಟು ಗಾಡವಾಗಿ ಬೆಳೆದಿದೆ. ಈ ರೀತಿಯ ಸಂದರ್ಭಗಳು ಅನೇಕರ ಜೀವದಲ್ಲಿಯೂ ನಡೆದಿರಬಹುದು.
ಹೌದಲ್ಲವೇ, ಇನ್ನೂ ವಾಟ್ಸಪ್ ಕೊಟ್ಟ ಅಕ್ಕಂದಿರ ಪರಿಚಯ ನಿಮಗೆ ಆಗಿಲ್ಲ ಅಲ್ವಾ? ಒಬ್ಬಳು ಪುತ್ತೂರು ಸಂಧ್ಯಾ, ದೀಪಿಕಾ ಸುಳ್ಯ, ನಂದಿನಿ ಬೆಂಗಳೂರು. ಈ ಮೂವರು ಅಕ್ಕಂದಿರ ನೀಡಿ ವಾಟ್ಸಪ್ ಗೆ ಹೇಳಲೇಬೇಕು “ಮನದಾಳದ ಥ್ಯಾಂಕ್ಯೂ”