ನವದೆಹಲಿ: 2020ರ ಫೆಬ್ರುವರಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ, ಏರ್ ಇಂಡಿಯಾದ ನಾಲ್ಕು ಬೋಯಿಂಗ್ 747 ಜೆಟ್ ವಿಮಾನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ.
ಬಹಳ ಹಳೆಯದಾಗಿದ್ದ ಈ ವಿಮಾನಗಳಿಗೆ ಭಾರಿ ಪ್ರಮಾಣದ ಇಂಧನದ ಅಗತ್ಯವಿತ್ತು ಹಾಗೂ ಇವುಗಳ ನಿರ್ವಹಣೆಯೂ ವೆಚ್ಚದಾಯಕವಾಗಿತ್ತು ಎಂದು ಡಿಜಿಸಿಎ ಹೇಳಿದೆ. ಈ ನಾಲ್ಕು ವಿಮಾನಗಳನ್ನು ಮುಂದೆ ಏನು ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಇವು ಗುಜರಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.