ಸುಳ್ಯ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರದ ವೀಕ್ಷಿಸಬೇಕು ಎಂದು ಅಂದುಕೊಂಡಿರುವ ಸುಳ್ಯ ತಾಲೂಕಿನ ಜನರಿಗೆ ಸಚಿವ ಎಸ್ ಅಂಗಾರ ಅವರು ಸಿಹಿ ಸುದ್ದಿ ಕೊಟ್ಟಿದ್ದಾರೆ.
ಸುಳ್ಯದ ಸಂತೋಷ್ ಚಿತ್ರ ಮಂದಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಿನಿಮಾ ತೋರಿಸಲು ಅವರು ವ್ಯವಸ್ಥೆ ಮಾಡಿದ್ದಾರೆ. ನಾಳೆಯಿಂದ ನಾಲ್ಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪೂರ್ವಾಹ್ನ ಗಂಟೆ 11, 2,6, 9 ಹೀಗೆ ಸಿನಿಮಾ ಪ್ರದರ್ಶನಗೊಳ್ಳಲಿದೆ. ಸ್ವತಃ ಅಂಗಾರ ಅವರೇ ಒಂದು ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ.