ಸುಳ್ಯ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಾರ್ಟಿ ಹೊಸ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆಯನ್ನು ನೀಡಿದೆ.
ಬಿಜೆಪಿಯ ಭದ್ರ ಕೋಟೆಯಾಗಿರುವ ಸುಳ್ಯ ತಾಲೂಕಿನಲ್ಲಿ ಮೊದಲ ಹೆಜ್ಜೆಯಾಗಿ ಆಪ್ ಬಿಜೆಪಿ ಮುಖಂಡ, ಸಹಕಾರಿ ಧುರೀಣ ಪ್ರಸನ್ನ ಎಣ್ಮೂರು, ಮಾಜಿ ಎಂ.ಎಲ್.ಎ. ಕಾಂಗ್ರೆಸ್ ನ ಕುಶಲರ ಪುತ್ರಿ ಸುಮನಾ ಕೆ ಸಹಿತ 17 ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಮಾ.೨೧ ರಂದು ನಡೆದ ಎ.ಎ.ಪಿ. ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಈ ಮಹತ್ವದ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಎಲ್ಲರಿಗೂ ಪಕ್ಷದ ಕ್ಯಾಪ್, ಧ್ವಜ ನೀಡಿ ಬರಮಾಡಿಕೊಂಡರು.ಆಮ್ ಆದ್ಮಿ ಪಕ್ಷಕ್ಕೆ ಪ್ರಸನ್ನ ಎಣ್ಮೂರು, ಶ್ರೀಮತಿ ಸುಮನ, ಇಂಜಿನಿಯರ್ ಕಲಂದರ್ ಎಲಿಮಲೆ, ಕರುಣಾಕರ ಎಣ್ಣೆಮಜಲು, ಚೇತನ್ ದೇವಸ್ಯ, ಇಂಜಿನಿಯರ್ ಸುನಿಲ್ ಎ.ಕೆ., ಬಾಲಕೃಷ್ಣ ನಡುಗಲ್ಲು, ವಿ.ಕೆ. ಕಲಂದರ್ ನಾಟಿಕೇರಿ, ಮಹಮ್ಮದ್ ಕಬೀರ್, ಸುನಿಲ್ ಕುಮಾರ್ ಕಾಂತಮಂಗಲ, ಕೀರ್ತಿರಾಜ್, ಮಹಮ್ಮದ್ ಜಾಸ್ಮಿನ್ ಕಾಪು, ಎಂ.ಡಿ. ಪಿಂಟೋ ಉಡುಪಿ, ಉದಯಪೂಜಾರಿ ಕುಂದಾಪುರ, ಮಂಜುನಾಥ್ ಕಾರ್ಕಳ, ಶ್ರೀಕಾಂತ್ ಬೊಳಿಯಮಜಲು, ಅಬ್ದುಲ್ ಅಝೀಜ್ ಸುಳ್ಯ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎ.ಎ.ಪಿ. ರಾಜ್ಯ ಸಂಘಟನಾ ಮುಖ್ಯಸ್ಥ ವಿಜಯ ಶರ್ಮ, ಬೆಂಗಳೂರು ಮಹಾನಗರ ಉಪಾಧ್ಯಕ್ಷ ಸುರೇಶ್ ರಾತೋಡು ಬೆಂಗಳೂರು, ದ.ಕ. ಜಿಲ್ಲಾ ಸಂಚಾಲಕ ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಂಘಟಕ ಸ್ಟೀಫನ್ ರಿಚಾರ್ಡ್ ಲೋಬೋ, ಹಿರಿಯ ಮುಖಂಡ ರೋಬೊಟ್ ರೆಗೋ, ಸುಳ್ಯ ವಿಧಾನ ಸಭಾ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ಸುಳ್ಯ ಸಹ ಸಂಚಾಲಕ ರಾಮಕೃಷ್ಣ ಬೀರಮಂಗಲ, ಸುಳ್ಯ ಸಹ ಸಂಚಾಲಕ ಮೋಹನದಾಸ ಎಣ್ಣೆಮಜಲು, ಕಡಬ ಉಸ್ತುವಾರಿ ರಶೀದ್ ಪೀಳ್ಯ ಕಡಬ, ಕಾರ್ಯದರ್ಶಿ ಗಣೇಶ್ ಪ್ರಸಾದ್, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಬೆಳ್ತಂಗಡಿ, ಜಿಲ್ಲಾ ನಾಯಕ ಸಂತೋಷ್ ಕಾಮತ್ ಇದ್ದರು. ಉಡುಪಿ ಮತ್ತು ದ.ಕ. ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ ಕಾರ್ಯಕ್ರಮ ನಿರೂಪಿಸಿದರು.