ಕಲ್ಲುಗುಂಡಿ: ಇಲ್ಲಿನ ಶಾಲಾ ವಠಾರದಲ್ಲಿ ಶನಿವಾರ ಕರಾವಳಿಯಲ್ಲಿಯೇ ಅತೀ ದೊಡ್ಡ ಯಕ್ಷಗಾನ ಹಬ್ಬ ಸಂಪಾಜೆ ಯಕ್ಷೋತ್ಸವ -2022 ನಡೆಯಲಿದೆ.
ಡಾ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಆಶ್ರಯದಲ್ಲಿ ನಡೆಯಲ್ಪಡುವ ಯಕ್ಷಗಾನಕ್ಕೆ ಊರ ಹಾಗೂ ಪರವೂರ ಯಕ್ಷಗಾನ ಪ್ರೇಮಿಗಳು ಆಗಮಿಸಲಿದ್ದಾರೆ. ಬ್ರಹೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಲಿದೆ.
ಉದ್ಘಾಟನಾ ಕಾರ್ಯಕ್ರಮ ಸಂಜೆ 4ಕ್ಕೆ ನಡೆಯಲಿದೆ. ಶ್ರೀದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿ ಎಡನೀರು ಮಠ ಕಾಸರಗೋಡು ನೆರವೇರಿಸಲಿದ್ದಾರೆ. ಪಿಬಿ ಸುಧಾಕರ್ ರೈ ಅಧ್ಯಕ್ಷರು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇವರು ಡಾ.ಕೀಲಾರು ಸಂಸ್ಮರಣೆ ಮಾಡಲಿದ್ದಾರೆ. ಯಕ್ಷಗಾನ ವ್ಯವಸ್ಥಾಪಕರಾದ ದಿವಾಕರ ಕಾರಂತ, ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಗೆ ಯಕ್ಷೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಖ್ಯಾತ ಯಕ್ಷಗಾನ ಕಲಾವಿದರಾದ ವಾಸುದೇವ ರಂಗಾ ಭಟ್ ಅಭಿನಂದನಾ ನುಡಿಗಳನ್ನು ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕಲಾವಿದರಾದ ಚೆನ್ನೈನ ತ್ರಿಚೂರ್ ಬ್ರದರ್ಸ್ ಅವರಿಂದ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರಾಜ ಸಂಸ್ಥಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಳಿದಂತೆ ಸಚಿವ ವಿ ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಾತ್ರಿ 9-12ರ ತನಕ ಚಂದ್ರಾವಳಿ ವಿಲಾಸ, ರಾತ್ರಿ 12-03ರ ತನಕ ಮಾಯಾ ಮಾರುತೇಯ, ಬೆಳಗ್ಗೆ 03-05ರ ತನಕ ಸಹಸ್ರ ಕವಚ, ಬೆಳಗ್ಗೆ 05-07ರ ತನಕ ಮಕರಾಕ್ಷ ಕಾಳಗ ನಡೆಯಲಿದೆ.