ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಬಾಹ್ಯಾಕಾಶ ಕ್ಷೇತ್ರದ ಮೇಲೆ ಕೂಡ ಪ್ರಭಾವ ಬೀರಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ಯುಎಸ್ಎ, ಯುಕೆ ಸೇರಿ ವಿವಿಧ ಯುರೋಪಿಯನ್ ದೇಶಗಳು ವಿವಿಧ ನಿರ್ಬಂಧ ವಿಧಿಸಿವೆ. ಅದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.
ಶುಕ್ರವಾರ ರಷ್ಯಾ ಉಡಾವಣೆ ಮಾಡಲು ನಿರ್ಧರಿಸಿದ್ದ ಒನ್ವೆಬ್ ರಾಕೆಟ್ ಮೇಲಿರುವ ಯುಎಸ್ಎ, ಜಪಾನ್ ಮತ್ತು ಯುಕೆಗಳ ಧ್ವಜಗಳನ್ನು ತೆಗೆಯಲಾಗಿದ್ದು, ಅಲ್ಲಿ ರಷ್ಯಾ ಧ್ವಜದೊಂದಿಗೆ ಭಾರತದ ಧ್ವಜವನ್ನು ಮಾತ್ರ ಉಳಿಸಲಾಗಿದೆ. ಹೀಗೆ ಯುಎಸ್, ಯುಕೆ ಮತ್ತು ಜಪಾನ್ ದೇಶಗಳ ಧ್ವಜಗಳನ್ನು ರಾಕೆಟ್ ಮೇಲಿಂದ ತೆಗೆದು, ಆ ಜಾಗದಲ್ಲಿ ಬಿಳಿ ಬಣ್ಣ ಹಚ್ಚಿ, ಭಾರತದ ಧ್ವಜವನ್ನು ಹಾಗೇ ಉಳಿಸಿಕೊಂಡ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಶೇರ್ ಮಾಡಿಕೊಂಡಿದ್ದಾರೆ.