ಕೀವ್: ರಷ್ಯಾ – ಉಕ್ರೇನ್ ನಡುವಿನ ಯುದ್ಧದ ಬಿಸಿ ನಿಧಾನವಾಗಿ ಜಗತ್ತಿಗೆ ತಟ್ಟಲಾರಂಭಿಸಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಸೂರ್ಯಕಾಂತಿ ಎಣ್ಣೆ ದರವು ಲೀಟರಿಗೆ ರು.195ರಿಂದ ರು.200ರವರೆಗೂ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೂರ್ಯಕಾಂತಿ ಎಣ್ಣೆ ದರವು ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ ಈಗಾಗಲೇ ರು. 40ರಷ್ಟು ಏರಿಕೆ ಆಗಿದೆ. ಈ ಏರಿಕೆಯು ಚಿಲ್ಲರೆ ಮಾರಾಟ ದರಕ್ಕೆ ವರ್ಗಾವಣೆ ಆಗಿಲ್ಲ. ಮಾರುಕಟ್ಟೆಯಲ್ಲಿ ಸದ್ಯ ಹಳೆಯ ಎಂಆರ್ ಪಿ ಇರುವ ದಾಸ್ತಾನು ಮಾರಾಟ ಆಗುತ್ತಿದೆ. ಶೀಘ್ರವೇ ಹೊಸ ಎಂಆರ್ ಪಿ ಬರಲಿದ್ದು, ಆಗ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.