ನವದೆಹಲಿ: ಇಲ್ಲೊಬ್ಬ ಪುರುಷ ಕಷ್ಟ ಪಟ್ಟು ಹುಡುಗಿ ಹುಡುಕಿ ಮದುವೆಯಾದ, ಆದರೆ ಆತನ ಸುಖ ಶಾಂತಿ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ.
ಹೌದು. ಮದುವೆಯಾದ ಮೊದಲ ರಾತ್ರಿ ಆತನಿಗೆ ವಿಚಿತ್ರ ಸತ್ಯದ ಅನುಭವ ಆಗಿದೆ. ಆತನ ಪತ್ನಿ ಹೆಣ್ಣಲ್ಲ ಪುರುಷ ಜನನಾಂಗ ಮತ್ತು ಅಪೂರ್ಣ ಕನ್ಯತ್ವ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯಿಂದ ನೊಂದ ಮದ್ಯಪ್ರದೇಶ ಮೂಲದ ವ್ಯಕ್ತಿ ಈಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆಗೆ ಸಮ್ಮತಿ ನೀಡಿರುವ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ದೂರು ನೀಡಿರುವ ಪತಿಯ ಪತ್ನಿಗೆ ಸೂಚಿಸಿದೆ.